ಧ್ರುವ ಸರ್ಜಾ ತಮ್ಮ ಲವ್ ಸ್ಟೋರಿ ಬಗ್ಗೆ ತಿಳಿಸಿ ಇತ್ತೀಚೆಗಷ್ಟೇ ಸುದ್ದಿಯಾಗಿದ್ದರು. ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಎನ್ನುವವರ ಜೊತೆ ಇದೇ ಡಿ.9 ರಂದು ಎಂಗೇಜ್ಮೆಂಟ್ ಆಗುವುದಾಗಿಯೂ ತಿಳಿಸಿದ್ದರು. ಇವ್ರ ಪೇರ್ ಹೇಗಿದೆ ನೋಡೋಣ ಅಂತಾ ಅವರ ಅಭಿಮಾನಿಗಳು, ಇಬ್ರೂ ಜೊತೆಗಿರೋ ಫೋಟೋಗಳನ್ನ ಹುಡುಕಾಡಿದ್ರೂ ಯಾರಿಗೂ ಸಿಕ್ಕಿರಲಿಲ್ಲ.
ಆದ್ರೆ ಈಗ ಬಿಗ್ ಬಾಸ್ ಖ್ಯಾತಿಯ ಒಳ್ಳೇ ಹುಡುಗ ಪ್ರಥಮ್ ಈ ಜೋಡಿಯನ್ನು ಭೇಟಿ ಮಾಡಿ ಮದುವೆ ನಿಶ್ಚಯವಾಗಿರುವುದಕ್ಕೆ ಕಂಗ್ರಾಜುಲೇಶನ್ಸ್ ಹೇಳಿ ಕೃಷ್ಣ ರುಕ್ಮಿಣಿಯರ ವಿಗ್ರಹವೊಂದನ್ನ ಗಿಫ್ಟ್ ಮಾಡಿದ್ದಾರೆ.

ಜೊತೆಗೆ ಧ್ರುವ- ಪ್ರೇರಣಾ ಜೋಡಿಯನ್ನ ಭೇಟಿಯಾದ ಖುಷಿಯಲ್ಲಿ ಅವ್ರಿಬ್ಬರ ಬಗ್ಗೆ ತಮ್ಮಫೇಸ್ ಬುಕ್ ಪೇಜ್‌ನಲ್ಲಿ ತಮ್ಮದೇ ಶೈಲಿಯಲ್ಲಿ ವಿಶೇಷ ಬರಹವನ್ನ ಬರೆದುಕೊಂಡಿದ್ದಾರೆ. ಈ ವೇಳೆ 3 ಜನ ಫೋಟೋಗೆ ಪೋಸ್ ಕೊಟ್ಟಿದ್ದು, ಇದ್ರಲ್ಲಿ ಮದುವೆ ಹೊಸ್ತಿಲಲ್ಲಿರೋ ಜೋಡಿ ಧ್ರುವಾ- ಪ್ರೇರಣಾ ಜೋಡಿಯನ್ನ ನೋಡಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








