ಹಾವೇರಿ : ರೈಲಿನ ಇಂಧನ ಸೋರಿಕೆ ; ಡೀಸೆಲ್ ಗಾಗಿ ಮುಗಿಬಿದ್ದ ಜನ!!

ಹಾವೇರಿ :

       ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಂಜಿನ್ ನಿಂದ ಡೀಸೆಲ್ ಸೋರಿಕೆಯಾಗಿದ್ದು ಇದನ್ನು ಗಮನಿಸಿದ ಜನ ಡೀಸೆಲ್ ತುಂಬಿಸಿಕೊಳ್ಳಲು ಮುಗಿಬಿದ್ದ ಘಟನೆ ನಡೆದಿದೆ.

      ಹಾವೇರಿ ಜಿಲ್ಲೆ ಯಲವಗಿ ರೈಲು ನಿಲ್ದಾಣದಲ್ಲಿ ರೈಲಿನ ಎಂಜಿನ್‌ವೊಂದು ಕೆಟ್ಟು ನಿಂತಿದೆ. ಇದೇ ವೇಳೇ ಸ್ಥಳೀಯ ಜನತೆ ಸೋರುತ್ತಿದ್ದ ಡಿಸೇಲ್‌ ಅನ್ನು ತುಂಬಿಕೊಳ್ಳುವ ಸಲುವಾಗಿ ಚೊಂಬು, ಪಾತ್ರೆ, ಬಿಂದಿಗೆಯನ್ನು ತಂದು ತುಂಬಿಕೊಂಡರು.

      ಒಬ್ಬರಿಂದ ಒಬ್ಬರಿಗೆ ಸುದ್ದಿ ಹರಡಿ ಅಪಾರ ಸಂಖ್ಯೆಯ ಜನ ಡೀಸೆಲ್ ತುಂಬಿಸಿಕೊಳ್ಳಲು ಆಗಮಿಸಿದ್ದು, ನೂಕುನುಗ್ಗಲು ಉಂಟಾಗಿದೆ. ಸ್ವಲ್ಪ ಯಡವಟ್ಟಾದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು. ಇನ್ನು ಜನತೆ ಹೀಗೆ ಡಿಸೇಲ್‌ ಅನ್ನು ತುಂಬಿಕೊಳ್ಳುತ್ತಿದ್ದರು ಕೂಡ ಅಧಿಕಾರಿಗಳು ಸುಮ್ಮನೆ ಇದದ್ದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ