ರಾಯ್ ಬರೇಲಿ:
‘Don’t forget 2004’ ಎಂದು ಹೇಳುವ ಮೂಲಕ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿಅವರು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಉತ್ತರಪ್ರದೇಶದ ರಾಯ್‌ಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೋನಿಯಾ ಗಾಂಧಿ, ‘Don’t forget 2004’ ( 2004ನ್ನು ಮರೆಯದಿರಿ) ಬಿಜೆಪಿಯು ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ಮಾಧ್ಯಮಗಳ ಭವಿಷ್ಯದ ನಡುವೆಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ತೀರುತ್ತದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅಜೇಯರಲ್ಲ ಎಂದು ಹೇಳಿದರು.
UPA Chairperson Sonia Gandhi on if she thinks PM Narendra Modi is invincible: Not at all. Don't forget 2004. Vajpayee Ji was invincible, but we won pic.twitter.com/0teDBtQ24G
— ANI UP (@ANINewsUP) April 11, 2019
2004ರಲ್ಲಿ ವಾಜಪೇಯಿಜೀ ಅವರು ಅಜೇಯ ಎಂದು ಭಾವಿಸಲಾಗಿತ್ತು. ಆದರೆ, ನಾವು ಗೆಲುವು ಸಾಧಿಸಿದೆವು, ಈಗ ಮೋದಿ ಅವರನ್ನು ಕೂಡಾ ಅಜೇಯ ಎನ್ನಲಾಗುತ್ತಿದೆ. ಆದರೆ, ಇದಕ್ಕೆ ಜನತೆ ಉತ್ತರ ನೀಡಲಿದ್ದಾರೆ ಎಂದರು.
1996, 1998 ಹಾಗೂ 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಜಯ ದಾಖಲಿಸಿತ್ತು. ಆದರೆ, 2004ರಲ್ಲಿ ಗೆಲ್ಲುವ ನಿರೀಕ್ಷೆ ಹುಟ್ಟಿಹಾಕಿದರೂ, ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷ ವಾಕ್ಯ ಕೂಗಿದರೂ, ಮತದಾರ ಮಾತ್ರ ವ್ಯತಿರಿಕ್ತ ಫಲಿತಾಂಶ ನೀಡಿದ್ದನ್ನು ಸ್ಮರಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ