ಬೆಂಗಳೂರು:
ಕಳೆದ ಕೆಲ ದಿನಗಳಿಂದ ರಾಜಧಾನಿಯಲ್ಲಿ ಆಗುತ್ತಿರುವ ಮಳೆಯನ್ನು ಎದುರಿಸುವ ವಿಷಯದಲ್ಲಿ ಆಗಲಿ ಯಾವುದೇ ವಿಷಯದಲ್ಲಿಯೇ ಆಗಲಿ ಇನ್ನುಮುಂದೆ ಬಿಬಿಎಂಪಿ ಹೈಕೋರ್ಟ್‌ನಿಂದ ಹೇಳಿಸಿಕೊಂಡು ಕೆಲಸ ಮಾಡಬಾರದು ತನ್ನ ಕರ್ತವ್ಯವನ್ನು ತಾನೇ ಅರಿತು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಸ್ವಚ್ಛತೆಯನ್ನು ಕಾಪಾಡಲು ಫ್ಲೆಕ್ಸ್, ಬ್ಯಾನರ್ ತೆರವು , ಜನರ ಪ್ರಾಣವನ್ನು ಉಳಿಸಲು ರಸ್ತೆಗುಂಡಿ ಭರ್ತಿ ಕಾರ್ಯವೇ ಆಗಿರಲಿ ಇದು ಬಿಬಿಎಂಪಿಯ ಕೆಲಸ ಅದನ್ನು ಕೋರ್ಟ್ ನಿಂದ ಹೇಳಿಕೊಂಡು ಮಾಡಬಾರದಿತ್ತು ತಾವಾಗಿಯೇ ಮಾಡಿದ್ದರೆ ಜನರ ಪ್ರಶಂಸೆಗೆ ಪಾತ್ರವಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟರು. ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡು ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ