ರಾಜ್ಯಸಭಾ ಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಿ ಡಾ.ಕೆ.ನಾರಾಯಣ್ ಕಣಕ್ಕೆ!!

ಬೆಂಗಳೂರು :  

     ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅಚ್ಚರಿ ಹೆಸರನ್ನು ಘೋಷಿಸುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಶಾಕ್ ನೀಡಿದೆ.

     ರಾಜ್ಯ ಬಿಜೆಪಿ ಘಟಕ ಮೂವರ ಹೆಸರನ್ನು ಶಿಫಾರಸು ಮಾಡಿತ್ತು. ಅಶೋಕ್ ಗಸ್ತಿ ಪತ್ನಿ ಸುಮಾ ಗಸ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಶಂಕರಪ್ಪ, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಹೆಸರನ್ನು ಸೂಚಿಸಿತ್ತು. ಆದರೆ ಹೈಕಮಾಂಡ್ ರಾಜ್ಯ ಬಿಜೆಪಿ ಸೂಚಿಸಿದ್ದ ಮೂವರ ಹೆಸರನ್ನು ತಿರಸ್ಕರಿಸಿ, ಆರ್.ಎಸ್.ಎಸ್. ಹಿನ್ನೆಲೆಯ ಡಾ.ನಾರಾಯಣ ಎಂಬುವವರ ಹೆಸರನ್ನು ಘೋಷಿಸಿರುವುದು ಅಚ್ಚರಿಗೆ ಕಾರಣವಾಗಿದೆ.

     ಬೆಂಗಳೂರಿನಲ್ಲಿರುವ ಡಾ.ಕೆ.ನಾರಾಯಣ ಅವರು ಮುದ್ರಕಣ ಉದ್ಯಮ ನಡೆಸುತ್ತಿದ್ದಾರೆ.‌ ಸ್ಪ್ಯಾನ್ ಪ್ರಿಂಟ್ ಎಂಬ‌ ಮುದ್ರಣ ಸಂಸ್ಥೆ ಹೊಂದಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ಕರಪತ್ರಗಳನ್ನು ಮುದ್ರಿಸಿ ಕೊಡುತ್ತಿದ್ದರು.‌ ಇವರು ದೇವಾಂಗ ಸಮುದಾಯದಕ್ಕೆ ಸೇರಿದವರು.

     ರಾಜ್ಯಸಭೆ ಉಪಚುನಾವಣೆಗೆ ನವೆಂಬರ್‌ 18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನ.19 ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ನ.23 ಕೊನೆಯ ದಿನವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link