ಚಿತ್ರದುರ್ಗ:
ಚಾಲಕ ರಹಿತ ಡ್ರೋಣ್ (ರುಸ್ತುಂ-2) ಮಾದರಿ ವಿಮಾನ ಮಂಗಳವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ಚಳ್ಳಕೆರೆ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಬಳಿಯ ತೋಟದಲ್ಲಿ ಪತನಗೊಂಡಿದೆ.
ಇಂದು ಬೆಳಗ್ಗೆ 7.30 ರ ಸುಮಾರಿಗೆ ಜೋಡಿ ಚಿಕ್ಕೆನಹಳ್ಳಿ ಗ್ರಾಮದ ತೋಟವೊಂದರಲ್ಲಿ ಏಕಾಏಕಿ ವಿಮಾನ ಪತನವಾಗಿದ್ದು, ವಿಮಾನ ಪತನವಾಗುತ್ತಿದ್ದಂತೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತ್ತು ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ ರಕ್ಷಣಾ ಅಭಿವೃದ್ಧಿ ಹಾಗೂ ಸಂಶೋಧನಾ ಸಂಸ್ಥೆ (ಡಿಆರ್ ಡಿಓ) ಪರೀಕ್ಷಾರ್ಥವಾಗಿ ಹಾರಿಸಿದ್ದ ವಿಮಾನ ಇದಾಗಿದ್ದು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ನಿಯಂತ್ರಣ ಕಳೆದುಕೊಂಡು ಬಿದ್ದಿರಬಹುದು ಎನ್ನಲಾಗಿದೆ.
ದೇಶದ ಗಡಿ ಪ್ರದೇಶ ಹಾಗೂ ನೌಕಾ ಸೇನೆಗೆ ಸೇರಿಸುವ ಉದ್ದೇಶದಿಂದ ಡಿಆರ್ ಡಿಓ ಮಾನವ ರಹಿತ ಯುದ್ದ ವಿಮಾನವನ್ನು ಅಭಿವೃದ್ಧಿ ಮಾಡುತ್ತಿತ್ತು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
