ಆತ್ಮಹತ್ಯೆ ತಡೆಗೆ ಮಹಿಳಾ ಸೋಂಕಿತರಿಗೆ ಡ್ರೆಸ್ ಕೋಡ್..!

ಬೆಂಗಳೂರು:

     ಆತ್ಮಹತ್ಯೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಯ ಆಡಳಿತ ವರ್ಗ ಮಹಿಳಾ ರೋಗಿಗಳಿಗೆ ಡ್ರೆಸ್‌ ಕೋಡ್‌ ಜಾರಿ ಮಾಡಿದೆ. 

     ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆಗೆ ಒಳಗಾಗುವುದು ಸಾಮಾನ್ಯ. ಅದರಂತೆ, ಇತ್ತಿಚಿಗೆ ನಗರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಇಬ್ಬರು ಸೋಂಕಿತ ಮಹಿಳೆಯರು ಶೌಚಾಲಯದಲ್ಲಿ ತಮ್ಮ ಸೀರೆಯಿಂದ ನೇಣು ಬೀಗಿದುಕೊಂಡಿದ್ದರು. ಹೀಗಾಗಿ ಮುಂದೆ ಆಗಬಹುದಾದ ಅನಾಹುತವನ್ನ ತಪ್ಪಿಸುವುದಕ್ಕಾಗಿ ಇಂತಹ ಕ್ರಮಕ್ಕೆ ಮುಂದಾಗಿದೆ. 

     ಆದರೆ, ಕೆಲವು ಹಿರಿಯ ಮಹಿಳಾ ರೋಗಿಗಳು ಇದನ್ನು ವಿರೋಧಿಸಿದ್ದು, ಸೀರೆಯೇ ತಮಗೆ ಆರಾಮ ಎಂದಿದ್ದಾರೆ. ಆದರೂ, ರೋಗಿಗಳ ಹಿತದೃಷ್ಟಿಯಿಂದ ಈ ದಿರಿಸನ್ನೇ ಕಡ್ಡಾಯ ಮಾಡಲಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link