ವಾರಾಣಸಿ :
ಉತ್ತರ ಪ್ರದೇಶದ ಪ್ರಸಿದ್ಧ ಹಿಂದು ದೇವಾಲಯವಾದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಡ್ರೆಸ್ ಕೋಡ್ ಜಾರಿಗೆ ತರಲಾಗುತ್ತಿದೆ.
ನಿಗದಿತ ಡ್ರೆಸ್ ಕೋಡ್ ಪ್ರಕಾರ ಪುರುಷರು ದೇವಾಲಯದಲ್ಲಿ ಕಾಶಿ ವಿಶ್ವನಾಥನನ್ನು ಸ್ಪರ್ಶಿಸಬೇಕೆಂದ್ರೆ ಧೋತಿ-ಕುರ್ತಾ ಧರಿಸಬೇಕು. ಮಹಿಳೆಯರು ಸೀರೆಯುಟ್ಟರೆ ಮಾತ್ರ ವಿಶ್ವನಾಥನನ್ನು ಸ್ಪರ್ಶಿಸಲು ಸಾಧ್ಯ.
ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಜಾರಿಗೆ ಬರ್ತಿರುವ ಹೊಸ ನಿಯಮದ ಪ್ರಕಾರ, ಜೀನ್ಸ್, ಪ್ಯಾಂಟ್, ಶರ್ಟ್ ಮತ್ತು ಸೂಟ್ ಧರಿಸಿದ ಭಕ್ತರು ದೇವಸ್ಥಾನ ಪ್ರವೇಶ ಮಾಡಬಹುದು. ಆದ್ರೆ ದೇವರನ್ನು ಸ್ಪರ್ಶಿಸಲು ಸಾಧ್ಯವಿಲ್ಲ. ಕಾಶಿ ವಿಶ್ವನಾಥನ ಸ್ಪರ್ಶಕ್ಕೆ ಡ್ರೆಸ್ ಕೋಡ್ ಜೊತೆಗೆ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ಭಾನುವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಕರ ಸಂಕ್ರಾಂತಿ ನಂತ್ರ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಬೆಳಗಿನ ಮಂಗಳಾರತಿಯಿಂದ ಮಧ್ಯಾಹ್ನದ ಮಹಾ ಮಂಗಳಾರತಿಯವರೆಗೆ ಸ್ಪರ್ಶ ದರ್ಶನವಿರಲಿದೆ.