10 ಅಡಿ ಎತ್ತರ ಹಾರಿ ಕಲ್ಲು ಕ್ವಾರಿಗೆ ಬಿದ್ದ ಕಾರು : ಓರ್ವ ಸಾವು!!

ಗೋಕರ್ಣ:

    ಅತಿ ವೇಗದಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಲ್ಲು ಕ್ವಾರಿಗೆ ಬಿದ್ದು, ಓರ್ವ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.

     ಅಂಕೋಲಾದಲ್ಲಿ ನೆಲೆಸಿರುವ ಗೌರವ ದೇವರಾಜ ಗೋಳಿಕಟ್ಟೆ (25) ಮೃತಪಟ್ಟವರು. ತಮ್ಮ ಮೂವರು ಗೆಳೆಯರೊಂದಿಗೆ ಅಗರಗೋಣದಿಂದ ಅಂಕೋಲಾಕ್ಕೆ ತಿರುಗಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

     ಎಲ್ಲಾ ಘಟನೆ ಸಿನಿಮೀಯ ರೀತಿಯಲ್ಲಿ ನಡೆದಿದ್ದು, ಗೌರವ ಅವರೇ ಕಾರು ಚಲಾಯಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಅತಿ ವೇಗದಲ್ಲಿದ್ದ ಕಾರನ್ನು  ಚೌಡಗೇರಿಯ ಶಾಲೆಯ ಬಳಿ ತಿರುಗಿಸಲು ಪ್ರಯತ್ನಿಸಿದಾಗ ಕಾರು ನಿಯಂತ್ರಣ ತಪ್ಪಿತು. 10 ಅಡಿಗಿಂತ ಎತ್ತರಕ್ಕೆ ಹಾರಿ ಮರದ ಎರಡು ಟೊಂಗೆಗಳ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಟೊಂಗೆ ಮರಿದು, ನೀರಿನಿಂದ ತುಂಬಿದ್ದ ಕಲ್ಲು ಕ್ವಾರಿಯಲ್ಲಿ ಕಾರು ಉಲ್ಟಾ ಬಿದ್ದಿದೆ.

     ಗೌರವ ಹೊರತು ಪಡಿಸಿ ಉಳಿದ ಮೂವರಾದ ಹನೀಶ ನಾಯಕ, ವರುಣ ನಾಯಕ ಮತ್ತು ರಜತ ನಾಯಕ ಮೇಲೆದ್ದು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಪಿ.ಎಸ್. ಐ. ನವೀನ್ ನಾಯ್ಕ ಮತ್ತು ಸಿಬ್ಬಂದಿ ಹರ ಸಾಡಸಪಟ್ಟು ಎರಡು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕ್ರೇನಿನ ಮುಖಾಂತರ ಕಾರನ್ನು ಹೊರತೆಗೆದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link