ಒನ್​​ ವೇನಲ್ಲಿ ಗಾಡಿ ಓಡಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು!!

ಬೆಂಗಳೂರು :

       ಒನ್​ವೇನಲ್ಲಿ ಗಾಡಿ ಡ್ರೈವ್ ಮಾಡೋರಿಗೆ ದಂಡದ ಜೊತೆಗೆ ಲೈಸೆನ್ಸ್‌ಅನ್ನು ಕೂಡ ರದ್ದು ಮಾಡಲು ಸಂಚಾರಿ ಪೊಲೀಸ್ ನಿರ್ಧರಿಸಿದೆ. 

    ಏಕ ಮುಖ ಸಂಚಾರ ರಸ್ತೆಗಳಲ್ಲಿ (ಒನ್‌ ವೇ) ವಾಹನಗಳನ್ನು ಚಲಾಯಿಸುವ ನಾಗರೀಕರಿಗೆ ಶಿಕ್ಷೆ ವಿಧಿಸುವಂತೆ ಸಾರಿಗೆ ಇಲಾಖೆ ಟ್ರಾಫಿಕ್ ಪೊಲೀಸರಿಗೆ ಶಿಪಾರಸು ಮಾಡಿದ್ದು, ಡ್ರಿಂಕ್ ಆಯಂಡ್ ಡ್ರೈವ್ ಮಾದರಿಯಲ್ಲಿ ಕ್ರಮಕ್ಕೆ ಶಿಫಾರಸು ಮಾಡಿದೆ. ಅಲ್ಲದೇ ದಂಡದ ಜತೆ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡುವಂತೆಯೂ ಇಲಾಖೆ ಟ್ರಾಫಿಕ್ ಪೊಲೀಸರಿಗೆ ಶಿಫಾರಸು ಮಾಡಿದೆ.

     ಒನ್ ವೇ ನಿಯಮ ಉಲ್ಲಂಘಿಸಿ ವಾಹನ ಸಂಚಾರ ಮಾಡಿದರೆ 500 ರೂ ದಂಡ ಹಾಕಲಾಗಿತ್ತು. ಆದರೂ ಇಂತಹ ಪ್ರಕರಣಗಳು ಕಡಿಮೆಯಾಗದ ಹಿನ್ನಲೆ ದಂಡದ ಜತೆ ಡ್ರೈವಿಂಗ್ ಲೈಸೆನ್ಸ್ ರದ್ದತಿಗೆ ಶಿಪಾರಸು ಮಾಡಲಾಗಿದೆ ಎನ್ನಲಾಗಿದೆ.

      ಒನ್‌ವೇ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಕೆಲವರಿಗೆ ಖಯಾಲಿ. ಮದ್ಯ ಸೇವಿಸಿ ವಾಹನ ಚಾಲನೆ ಮಾಡುವಷ್ಟೇ ಅಪಾಯಕಾರಿ ಒನ್ ವೇಗಳಲ್ಲಿ ವಾಹನ ಓಡಿಸುವುದು. ಬಹುತೇಕರು ಗೊತ್ತಿದ್ದು ಒನ್‌ವೇನಲ್ಲಿ ಬರುತ್ತಾರೆ. ಡಿಎಲ್‌ ರದ್ದುಗೊಳ್ಳಲಿದೆ ಎಂಬ ಎಚ್ಚರಿಕೆಯಿಂದಲಾದರೂ ಜನರು ಸಂಚಾರ ಶಿಸ್ತು ಪಾಲನೆ ಮಾಡಲಿ ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap