ಬೆಂಗಳೂರು:
ಕೆಲ ಸಿನಿ ತಾರೆಯರು ಸೇರಿ ತಮ್ಮ ಪರಿಚಿತರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ಆಫ್ರಿಕಾ ಮೂಲದ ಲೌಮ್ ಪೆಪ್ಪೆರ್ ಸಾಂಬಾ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ನಟಿ ರಾಗಿಣಿ, ಅವರ ಸ್ನೇಹಿತ ರವಿ ಶಂಕರ್ ಸೇರಿ ನಾಲ್ವರನ್ನು ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಈ ಕುರಿತು ಪ್ರತಿಕ್ರಿಯಿಸಿ,
ಆಫ್ರಿಕಾ ಪ್ರಜೆ ಲೌಮ್‌ನನ್ನು ಬಂಧಿಸಲಾಗಿದ್ದು, ಈತ ಈಗಾಗಲೇ ಬಂಧನಕೊಳ್ಳಗಾದ ಆರೋಪಿ ರವಿ ಶಂಕರ್ ಸೇರಿ ಕೆಲ ಸಿನಿ ತಾರೆಯರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮಾಹಿತಿ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಮಾದಕ ಜಾಲದ ವಿರುದ್ಧ ಸಮರ ಸಾರಲು ಸಿಸಿಬಿ ಮುಂದಾಗಿದ್ದು, ದಿನದಿಂದ ದಿನಕ್ಕೆ ಜಾಲದಲ್ಲಿ ತೊಡಗಿದವರನ್ನು ಬಂಧಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
