ಬೆಡ್ ಸಿಗದೆ ಕೊರೊನಾ ಸೋಂಕಿತ ಬಾಣಂತಿ ಸಾವು!!

ಬೆಂಗಳೂರು:

    ಆಸ್ಪತ್ರೆಯಲ್ಲಿ ಬೆಡ್‌ ಹಾಗೂ ಸೂಕ್ತ ಚಿಕಿತ್ಸೆ ಸಿಗದ ಕಾರಣ ಆರು ದಿನದ ಮಗುವನ್ನು ಬಿಟ್ಟು ಬಾಣಂತಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.

    ಮೃತ ಮಹಿಳೆಗೆ ಕಳೆದ ಆರು ದಿನಗಳ ಹಿಂದೆ ಹೆರಿಗೆ ಆಗಿ ಮಗು ಜನಿಸಿತ್ತು. ಆದರೆ, ಹೆರಿಗೆಯ ನಂತರ ಆಕೆಗೆ ಕೊರೋನಾ ಪಾಸಿಟೀವ್‌ ಇರುವುದು ದೃಢಪಟ್ಟಿತ್ತು. ಹೀಗಾಗಿ ಕಳೆದ ಒಂದು ವಾರದಿಂದ ಆಕೆಗೆ ಉತ್ತಮ ಚಿಕಿತ್ಸೆ ನೀಡಲು ಕುಟುಂಬ ವರ್ಗ ಪರದಾಡಿದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ನಿನ್ನೆ ಸಂಜೆ ಆಕೆಗೆ ಧಿಡೀರ್‌ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ.

      ಹೆರಿಗೆ ಆದ ಬಳಿಕ ಬಾಣಂತಿಗೆ ಸೋಂಕು ದೃಢವಾಗಿತ್ತು. ಆದರೆ, ನಿನ್ನೆ ತಡರಾತ್ರಿವರೆಗೂ ಬೆಡ್ ಸಿಗದ ಹಿನ್ನೆಲೆಯಲ್ಲಿ 26 ವರ್ಷದ ಬಾಣಂತಿ ಆಂಬುಲೆನ್ಸ್​ನಲ್ಲಿ ಅಲೆಡಾಡ ಬೇಕಾಯಿತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಆರೋಗ್ಯ ಅಧಿಕಾರಿಗಳಿಗೆ ಎಷ್ಟು ಕರೆ ಮಾಡಿದರೂ ರೆಸ್ಪಾನ್ಸ್ ಸಿಗಲಿಲ್ಲ.

       ಜೊತೆಗೆ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿಯವರಿಗೆ ಸಹಾಯಕ್ಕಾಗಿ ಕುಟುಂಬಸ್ಥರು ಕರೆ ಮಾಡಿದ್ದರು. ಬೆಡ್ ಬೇಕೆಂದು ಶಾಸಕಿ ಸೌಮ್ಯ ರೆಡ್ಡಿ ಟ್ವೀಟ್ ಮಾಡಿದ್ದರೂ ಎಲ್ಲೂ ಸಿಗಲಿಲ್ಲ.

      ಹಾಗಾಗಿ, ನಾಗರಭಾವಿಯಲ್ಲಿ ಇಂದು ಬೆಳಗಿನ ಜಾವ ಉಸಿರಾಟದ ತೊಂದರೆಯಿಂದ ಬಾಣಂತಿ ಮಹಿಳೆ ಮೃತಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ