ಬೆಂಗಳೂರು:
ನಟ ದುನಿಯಾ ವಿಜಯ್ ಮೇಲೆ ಅವರ ಮಗಳು ಮೋನಿಕಾ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.
ಅಕ್ಟೋಬರ್ 22 ರಂದು ಮೋನಿಕಾ ರವರು ವಿಜಯ್ ಮನೆಗೆ ವೈಯಕ್ತಿಕ ದಾಖಲೆಗಳನ್ನು ತೆಗೆದುಕೊಳ್ಳಲು ಹೋದ ವೇಳೆ ವಿಜಯ್ ಪತ್ನಿ ಕೀರ್ತಿ ಅವರು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ಬಳಿಕ ವಿಜಯ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಗೊಡೆಗೆ ತಲೆಯನ್ನು ಢಿಕ್ಕಿ ಹೊಡೆಸಿದ್ದರು ಎಂದು ಮೋನಿಕಾ ದೂರಿದ್ದಾರೆ.
ಕಾರು ಚಾಲಕ ವೆುಹಮದ್, ವಿನೋದ್, ಹೇಮಂತ್ ಸೇರಿ ಒಟ್ಟು 5 ಮಂದಿಯ ವಿರುದ್ಧ ಮೋನಿಕಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೋನಿಕಾ ಸದ್ಯ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಬಲಗೈಗೆ ಗಾಯವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನ ಸಂಬಂಧ ದುನಿಯಾ ವಿಜಿ ಹಾಗೂ ಮೂರನೇ ಹೆಂಡತಿ ಕೀರ್ತಿ ಸೇರಿದಂತೆ ಐವರ ಮೇಲೆ ವಿಜಯ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ಸಂಬಂಧ ಎಫ್ ಐಆರ್ ದಾಖಲು ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
