ಮೇ.15ರವರೆಗೂ ಶಾಲಾ-ಕಾಲೇಜು, ‌ ಧಾರ್ಮಿಕ ಕೇಂದ್ರಗಳು ಬಂದ್!!

ನವದೆಹಲಿ :

      ಮಾರಕ ಕೊರೊನಾ ವೈರಸ್ ದೇಶಾದ್ಯಂತ ಆತಂಕ ತಂದೊಡ್ಡಿರುವುದರಿಂದ ಶಾಲೆ, ಕಾಲೇಜುಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ಮೇ 15ರ ತನಕ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ದೇಶದಲ್ಲಿ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಮಾರಕ ವೈರಸ್‌ ನಿಂದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಸೋಂಕು ನಿಯಂತ್ರಿಸಲು ಕೇಂದ್ರ ಸರ್ಕಾರ ಏ.14ರವರೆಗೆ ಲಾಕ್ ಡೌನ್ ಘೋಷಿಸಿದೆ. ಅಗತ್ಯ ಸೇವೆಗಳಷ್ಟೇ ಲಭ್ಯವಾಗುತ್ತಿದ್ದು, ಉಳಿದವನ್ನು ಬಂದ್ ಮಾಡಲಾಗಿದೆ.

     ಏತನ್ಮಧ್ಯೆ, ದಿನೇ ದಿನೇ ವೊರಸ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಏ.14ರ ಬಳಿಕವೂ ಲಾಕ್ ಡೌನ್ ಮುಂದುವರೆಸುವಂತೆ ಒತ್ತಡ ವ್ಯಕ್ತವಾಗಿದೆ ಎನ್ನಲಾಗಿದೆ. ಈಗ ಹೇರಿರುವ ಲಾಕ್ ಡೌನ್ ನಿರ್ಬಂಧವನ್ನು ಸ್ವಲ್ಪಮಟ್ಟಿಗೆ ಸಡಿಲಗೊಳಿಸಿ ಮೇ.15ರವರೆಗೆ ಮುಂದುವರೆಸಿದರೆ ಒಳಿತು ಎಂದು ಸಚಿವರ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಅದರಂತೆ ಮೇ.15ರವರೆಗೆ ಎಲ್ಲ ಶಾಲಾ-ಕಾಲೇಜು, ಧಾರ್ಮಿಕ ಕೇಂದ್ರ, ಶಾಪಿಂಗ್ ಮಾಲ್ ಗಳನ್ನು ಬಂದ್ ಮಾಡುವಂತೆಯೂ ಈ ಸಮಿತಿ ಸಲಹೆ ನೀಡಿದೆ ಎನ್ನಲಾಗಿದೆ.

     ಹಿರಿಯ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವರ ಸಮಿತಿ ಈ ಕುರಿತಂತೆ ಶಿಫಾರಸ್ಸು ಮಾಡಿದ್ದು, ಪ್ರಧಾನಿ ಮೋದಿ ಈ ಕುರಿತಂತೆ ಯಾವ ನಿರ್ಧಾರ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap