ತುಮಕೂರು :

5 ನೇ ತರಗತಿ ಓದುತ್ತಿರುವ ತಮ್ಮನನ್ನು ಚಾಕುವಿನಿಂದ ಇರಿದು ಅಣ್ಣನೇ ಕೊಲೆ ಮಾಡಿರುವ ಘಟನೆ ನಗರದ ಸರಸ್ವತಿಪುರಂನಲ್ಲಿ ನಡೆದಿದೆ.
ಟಿ.ಪಿ.ಕಿರಣ್(10) ನನ್ನು ಪಿಯುಸಿ ಓದುತ್ತಿರುವ 17 ವರ್ಷದ ಅಣ್ಣ ಕಿಶೋರ್ ಹತ್ಯೆ ಮಾಡಿದ್ದಾನೆ. ಹುಟ್ಟುಹಬ್ಬದ ಆಚರಣೆಗೆ ತಾಯಿ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಮ್ಮನನ್ನು ಹತ್ಯೆ ಮಾಡಿದ್ದಾನೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ.
ತಾಯಿ ರಾತ್ರಿ ಊಟ ಮುಗಿಸಿ ಮನೆಯ ಹೊರಗಿನ ಪಾರ್ಕ್ ಬಳಿ ವಾಕಿಂಗ್ ಗೆ ತೆರಳಿದ್ದಾಗ ಕಿಶೋರ್ ಈ ಕೃತ್ಯ ಎಸಗಿದ್ದಾನೆ. ಗಾಂಜಾಗೆ ಅಡಿಕ್ಟ್ ಆಗಿ ಕೃತ್ಯ ಎಸಗಿರುವ ಶಂಕೆಯೂ ವ್ಯಕ್ತವಾಗಿದೆ.
ಸ್ಥಳಕ್ಕೆ ಪಿಎಸ್‌ಐ ನವೀನ್, ಸಿಪಿಐ ಪಾರ್ವತಮ್ಮ ಭೇಟಿ ಪರಿಶೀಲನೆ ನಡೆಸಿದ್ದು, ಜಯನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








