ಮಂಗಳೂರು:
ನಾಯಿ-ಬೆಕ್ಕನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಡೆತ್‍ನೋಟ್ ನಲ್ಲಿ ಉಲ್ಲೇಖಿಸಿ, ವೃದ್ಧ ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಟೆಕಾರು ಬೀರಿಯಲ್ಲಿ ಘಟನೆ.
ದೇವರಾಜ್ ಗಾಣಿಗ(74)ವಸಂತಿ(64)ಆತ್ಮಹತ್ಯೆ ಮಾಡಿಕೊಂಡಿರುವ ವೃದ್ಧ ದಂಪತಿಗಳು. ದೇವರಾಜ್ ಗಾಣಿಗ ಆಕಾಶವಾಣಿಯಲ್ಲಿ ಚಾಲಕ ವೃತ್ತಿಯಲ್ಲಿದ್ದು ನಿವೃತ್ತರಾಗಿದ್ದರು ಎನ್ನಲಾಗಿದೆ.
ಮೃತ ದಂಪತಿಗೆ ಮಕ್ಕಳಿರಲಿಲ್ಲ, ಈ ವಿಚಾರವಾಗಿ ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಇದೀಗ ಶಂಕಿಸಲಾಗುತ್ತಿದೆ.
ಆತ್ಮಹತ್ಯೆಗೂ ಮುನ್ನ ವಸಂತಿಯವರ ಅಣ್ಣನ ಮಗಳು ಶ್ವೇತ ಹೆಸರಿಗೆ ತಮ್ಮ ಆಸ್ತಿಯನ್ನು ಬರೆದಿಟ್ಟು, ನಾಯಿ-ಬೆಕ್ಕನ್ನು ಚೆನ್ನಾಗಿ ನೋಡಿಕೋ ಎಂದು ಡೆತ್‍ನೋಟ್ ಉಲ್ಲೇಖಿಸಿದ್ದಾರೆ.
ಸ್ಥಳಕ್ಕೆ ಉಳ್ಳಾಲ ಪಿಐ ಗೋಪಿಕೃಷ್ಣ ಸಿಬ್ಬಂದಿ ಭೇಟಿ ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ