ಸುಮಲತಾಗೆ ಯೋಧ ಹಾಕಿದ್ದ ಮೊದಲ ಮತ ಅಸಿಂಧು!!

ಮಂಡ್ಯ:

      ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರಿಗೆ ಮತ ಹಾಕಿದ್ದ ಯೋಧನ ಮೊದಲ ಮತ ಅಸಿಂಧು ಆಗಿದೆ.

      ಸಿಆರ್‌ಪಿಎಫ್‌ ಯೋಧ ರಾಜನಾಯಕ್ ಅಂಚೆ ಮತದಾನ ಮೂಲಕ ಸುಮಲತಾ ಅವರಿಗೆ ಮತ ಹಾಕಿದ್ದರು. ಯೋಧ ತಾನು ಸುಮಲತಾಗೆ ಮತ ಹಾಕಿದ್ದನ್ನ ಸೆಲ್ಫಿ ಮೂಲಕ ಫೇಸ್‍ಬುಕ್‍ಗೆ ಹಾಕಿ ಪ್ರಚಾರ ಮಾಡಿದ್ದರು. ಯೋಧನ ಪೋಸ್ಟ್​ಗೆ ಖುದ್ದು ಸುಮಲತಾ ಧನ್ಯವಾದ ಅರ್ಪಿಸಿ ನಿಮಗೆ ಚಿರಋಣಿ ಎಂದಿದ್ದರು.

      ಚುನಾವಣಾ ಆಯೋಗದ ಪ್ರಕಾರ ಯಾರಿಗೆ ವೋಟ್ ಹಾಕಿದ್ದೇನೆಂದು ಬಹಿರಂಗಪಡಿಸುವುದು ಅಪರಾಧ. ಗೌಪ್ಯ ಮತದಾನವನ್ನು ಮರೆತು ಹಕ್ಕಿನ ದುರ್ಬಳಕೆ ಬಹಿರಂಗಗೊಳಿಸದ್ದಕ್ಕೆ ಯೋಧನ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಯೋಧನ ಮತವನ್ನು ಅಸಿಂಧುಗೊಳಿಸಿ ಶಿಸ್ತು ಕ್ರಮ ಕೈಗೊಂಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap