ಮಂಡ್ಯ:
ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ನ್ನು ಗೆಲ್ಲಿಸಲು ಬಿಜೆಪಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡರಿಗೆ ಮತನೀಡಿ. …! ಶಾಕ್ ಆಯ್ತಾ..? ಹೌದು ಇದೊಂದು ಕನ್ ಫ್ಯೂಸ್ ಮಾಡುವ ಸಂಗತಿ. ಯಾಕೆಂದರೆ ಮಂಡ್ಯದಲ್ಲಿ ಜೆಡಿಎಸ್ ನಿಂದ ಕಣದಲ್ಲಿರುವುದು ಎಲ್.ಆರ್.ಶಿವರಾಮೇಗೌಡರು. ಆದರೆ ಬಿಜೆಪಿ ಅಭ್ಯರ್ಥಿಗೆ ಮತ ನೀಡುವುದೆಂದರೆ ಏನು..??
ಅಸಲಿಗೆ ಆಗಿದ್ದೇನೆಂದರೆ, ಭಿತ್ತಿಪತ್ರ ಪ್ರಕಟವಾಗುವ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಎನ್ನುವ ಬದಲು ಬಿಜೆಪಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಎಂದು ಪ್ರಕಟವಾಗಿದೆ. ಈ ಭಿತ್ತಿಪತ್ರವನ್ನು ಒಮ್ಮೆಯೂ ಪರಿಶೀಲಿಸದೇ, ಶಿವರಾಮೇಗೌಡರ ಆಪ್ತ ಅನಂತರಾಮಪ್ಪ ಹಂಚಿಕೆ ಮಾಡಿಬಿಟ್ಟಿದ್ದಾರೆ. ಈ ಸುದ್ಧಿ ಸಾರ್ವಜನಿಕವಾಗಿ ಬಹಿರಂಗಗೊಂಡು ಬಾರಿ ಸದ್ದು ಮಾಡುತ್ತಿದೆ.
