ಲೋಕಸಭಾ ಫಲಿತಾಂಶ : 4 ಗಂಟೆ ತಡ!!!

ಬೆಂಗಳೂರು :

     ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಸುಮಾರು 4 ಗಂಟೆ ವಿಳಂಬವಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

     ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ”ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಯಾದ್ರಚ್ಛಿಕ ವಿಧಾನದಲ್ಲಿ 5 ವಿವಿ ಪ್ಯಾಟ್‌ ಮತವನ್ನು ಇವಿಎಂ ಜತೆಗೆ ಕಡ್ಡಾಯವಾಗಿ ತಾಳೆ ಹಾಕಬೇಕಿದೆ. ಒಂದು ವಿವಿಪ್ಯಾಟ್‌-ಇವಿಎಂ ತಾಳೆ ಹಾಕುವುದಕ್ಕೆ ಸರಾಸರಿ 45 ನಿಮಿಷ ಬೇಕು. ಹೀಗಾಗಿ ಒಂದು ಲೋಕಸಭೆ ಕ್ಷೇತ್ರ ವ್ಯಾಪ್ತಿಯ 40 ವಿವಿಪ್ಯಾಟ್‌ ಯಂತ್ರಗಳ ಲೆಕ್ಕಾಚಾರಕ್ಕೆ 4 ಗಂಟೆ ಬೇಕಾಗುತ್ತದೆ. ಕೆಲ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಅಂಥ ಕಡೆ ಫಲಿತಾಂಶ ಘೋಷಣೆ ಇನ್ನಷ್ಟು ವಿಳಂಬವಾಗುತ್ತದೆ,” ಎಂದು ತಿಳಿಸಿದರು.

       ನಾಳೆ ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಬಳಿಕ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ. ಬೇಗ ಎಣಿಕೆ ಮುಗಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಸ್ವಲ್ಪ ತಡ ಆಗಬಹುದು. 3 ಗಂಟೆಯ ಒಳಗೆ ಬಹುತೇಕ ರಿಸಲ್ಟ್ ಕೊಡುತ್ತೇವೆ. ಸಂಜೆ 6 ಗಂಟೆ ಒಳಗೆ 28 ಕ್ಷೇತ್ರಗಳ ರಿಸಲ್ಟ್ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

 

Recent Articles

spot_img

Related Stories

Share via
Copy link