ಕೇರಳ : 
ಕೊಟ್ಟಯಂನಿಂದ 60 ಕಿ.ಮೀ. ದೂರದ ಅರಣ್ಯದಲ್ಲಿ ಕಾಡಾನೆಯೊಂದು ಶಬರಿಮಲೆ ಯಾತ್ರಿಕನನ್ನು ತುಳಿದು ಕೊಂದಿರುವ ಘಟನೆ ನಡೆದಿದೆ.
ತಮಿಳು ನಾಡಿನ ಸೇಲಂ ನವರಾದ ಪರಮಶಿವಂ (35) ಅವರು ಕಾಡಾನೆ ತುಳಿತಕ್ಕೆ ಬಲಿಯಾದ ವ್ಯಕ್ತಿ. ಇವರು ತಮ್ಮ ಏಳು ವರ್ಷದ ಪುತ್ರ ಮತ್ತು ಇತರ 13 ಮಂದಿಯೊಂದಿಗೆ ಎರುಮಲೆ ಅರಣ್ಯ ಮಾರ್ಗವಾಗಿ ಪಂಬಾ ಗೆ ಹೋಗುತ್ತಿದ್ದಾಗ ಇಂದು ನಸುಕಿನ 1 ಗಂಟೆಯ ವೇಳೆಗೆ ಕಾಡಾನೆ ದಾಳಿಗೆ ಬಲಿಯಾದರು.
ಪರಮಶಿವಂ ಅವರು ತಮ್ಮ ಪುತ್ರನನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದರು. ಆದಾಗ್ಯೂ ಪರಮಶಿವಂ ಅವರೊಂದಿಗೆ ಇದ್ದ ಇತರರು ಮತ್ತು ಆತನ ಪುತ್ರ ಅದೃಷ್ಟವಶಾತ್ ಪಾರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








