ಶಿವಮೊಗ್ಗ:
ಸರ್ವೆ ಕ್ಯಾಂಪ್‍ಗೆ ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಬೀರನಕೆರೆ ಬಳಿ ನಡೆದಿದೆ.
ಜಿಲ್ಲೆಯ ಪಿಇಎಸ್ ಸಂಸ್ಥೆಯ ಫೆಸಿಟ್ ಇಂಜಿನಿಯರಿಂಗ್ ಕಾಲೇಜಿನ ಪರಿಣಿತಾ (20) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವಿದ್ಯಾರ್ಥಿನಿ.
ಇಂಜಿನಿಯರಿಂಗ್ ಕಾಲೇಜ್ ವತಿಯಿಂದ ಬೀರನಕೆರೆ ಬಳಿ ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಕ್ಯಾಂಪ್ ನಡೆಸಲಾಗುತ್ತಿತ್ತು. ಸುಮಾರು 22 ವಿದ್ಯಾರ್ಥಿಗಳ ತಂಡ ಕಳೆದ 4 ದಿನಗಳಿಂದ ಬೀರನಕೆರೆಯಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಇಂದು ಬೆಳಿಗ್ಗೆ ವಿದ್ಯಾರ್ಥಿನಿ ವಾಕಿಂಗ್ ತೆರಳಿದ್ದ ವೇಳೆ ಅಪರಿಚಿತ ವಾಹನ ಗುದ್ದಿ ಸಾವು ಸಂಭವಿಸಿದೆ ಎಂದು ಕಾಲೇಜ್ ಆಡಳಿತ ಮಂಡಳಿಯ ಸ್ಪಷ್ಟನೆ ನೀಡಿದ್ದಾರೆ
ಆದರೆ ವಿದ್ಯಾರ್ಥಿನಿಯ ಪೋಷಕರು ಮಾತ್ರ ಇದನ್ನು ಒಪ್ಪದೆ, ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ಶವಗಾರದ ಬಳಿ ಕಾಲೇಜ್ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ವಾಗ್ವಾದ ನಡೆದಿದ್ದು ಪೋಲಿಸರ ಮಧ್ಯ ಪ್ರವೇಶ ನಡೆಸಿದರು.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
