ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅಕ್ಟೋಬರ್ 15 ಲಾಸ್ಟ್ ಡೇಟ್ !!!

ಬೆಂಗಳೂರು:

     ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಜನರು ಅಕ್ಟೋಬರ್ 15ರ ತನಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ, ಜಿಲ್ಲಾ ಚುನಾವಣಾಧಿಕಾರಿ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.

      ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದುವರೆಗೂ 91,00,207 ಮತದಾರರು ಇದ್ದಾರೆ. ರಾಜ್ಯದಲ್ಲಿ ನೆರೆಹಾವಳಿ ಇದ್ದಿದ್ದರಿಂದ ಮತದಾರರ ಲಟ್ಟಿ ಪರಿಶೀಲನೆ ತಡವಾಗಿ ಮಾಡಲಾಗುತ್ತಿದೆ. ಅರ್ಜಿಗಳ ಸ್ವೀಕರಿಸಿದ ಬಳಿಕ ಅಕ್ಟೋಬರ್ 16 ರಿಂದ ಮನೆಮನೆಗೆ ಹೋಗಿ ಪರಿಶೀಲಿಸಲಾಗುವುದು. ಮತಗಟ್ಟೆಗಿಂತ ಎರಡು ಕಿ.ಮೀ ಹೆಚ್ಚು ದೂರದಲ್ಲಿ ಮತದಾರ ಇರಬಾರದು. ಮತಗಟ್ಟೆಗಳ ಬದಲಾವಣೆ ಇದ್ದಲ್ಲಿಯೂ ಪರಿಷ್ಕರಣೆ ವೇಳೆ ಬದಲಾವಣೆ ಮಾಡಲಾಗುವುದು. ಫೆಬ್ರವರಿ 2002 ರಿಂದ ಜನವರಿ 2003ರ ವರೆಗೆ ಹುಟ್ಟಿದವರು ಹೊಸ ಮತದಾರರಾಗಲಿದ್ದು, ಈ ವೇಳೆ ನೋಂದಣಿ ಮಾಡಿಕೊಂಡು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

      “ನಮೂನೆ 7ರ ಮೂಲಕ ಅರ್ಜಿ ಸಲ್ಲಿಸಿ ಜನರು ಒಂದಕ್ಕಿಂತ ಹೆಚ್ಚು ಸ್ಥಳದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ ಅದನ್ನು ರದ್ದುಗೊಳಿಸಬಹುದಾಗಿದೆ. ಮರಣವಾಗಿದ್ದರೆ ಅಥವ ಖಾಯಂ ಆಗಿ ಸ್ಥಳಾಂತರಗೊಂಡಿದ್ದರೆ ಹೆಸರು ತೆಗೆದು ಹಾಕಬೇಕು” ಎಂದು ಆಯುಕ್ತರು ಮನವಿ ಮಾಡಿದರು.

ಮತದಾರರು ಸಲ್ಲಿಸಬೇಕಾದ ವಿವರಗಳು:

1) ಪಾಸ್ ಪೋರ್ಟ್
2) ಚಾಲನಾ ಪರವಾನಗಿ
3) ಆಧಾರ್ ಕಾರ್ಡ್
4) ಪಡಿತರ ಚೀಟಿ
5) ಸರ್ಕಾರಿ ನೌಕರರ ಗುರುತಿನ ಚೀಟಿ
6) ಬ್ಯಾಂಕ್ ಪಾಸ್ ಬುಕ್
7) ರೈತರ ಗುರುತಿನ ಚೀಟಿ
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap