ಮೈಸೂರು:
ಕೊರೊನಾ ಸೋಂಕಿನ ಕರಿನೆರಳು ರಾಜವಂಶದ ಖಾಸಗಿ ದರ್ಬಾರು ನೋಡಲು ಕಾದು ಕುಳಿತವರಿಗೆ ಭಾರೀ ನಿರಾಸೆಯಾಗಿದೆ.
ಕೊರೊನಾ ಸೋಂಕಿನ ಹಾವಳಿಯಿಂದ ಜಗದ್ವಿಖ್ಯಾತ ಮೈಸೂರು ದಸರಾವನ್ನ ಸರಳವಾಗಿ ಆಚರಿಸಲು ನಿರ್ಧರಿಸಲಾಗಿರುವುದರಿಂದ ಈ ಬಾರಿಯ ರಾಜ ದರ್ಬಾರ್ ನೋಡಲು ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ.
ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಟಿ.ವಿಗಳ ಮೂಲಕ ಈ ದಸರಾವನ್ನು ಸವಿಯುವ ಅವಕಾಶವಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಮಾಧ್ಯಮದವರಿಗೂ ನಿರ್ಬಂಧ ವಿಧಿಸಿರುವ ಕಾರಣ, ಖಾಸಗಿ ದಸರಾ ನೋಡುವ ಭಾಗ್ಯ ಈ ಬಾರಿ ಸಿಗುವುದಿಲ್ಲ.
ಮೈಸೂರಿನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ ಅರಮನೆಯಲ್ಲಿ 2020ರ ಸಾಲಿನ ಶರನ್ನವರಾತ್ರಿ ಸಂದರ್ಭದಲ್ಲಿ ಪೂಜಾ ವಿಧಿವಿಧಾನಗಳನ್ನ ಸಾಂಪ್ರದಾಯಿಕವಾಗಿ ನಡೆಸಲಾಗುವುದು. ಮುನ್ನೆಚ್ಚರಿಕೆ ಕ್ರಮ ಅವಶ್ಯಕವಾಗಿರುವುದರಿಂದ ಆಚರಣೆಯಲ್ಲಿ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಭಾಗವಹಿಸುವಿಕೆ ಇರುವುದಿಲ್ಲ. ಕರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸಹಕರಿಸಬೇಕು ಎಂದು ಸ್ವತಃ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ