ಆಹ್ವಾನಪತ್ರಿಕೆ ಮೂಲಕ 5 ಕೋಟಿ ಮೌಲ್ಯದ ಡ್ರಗ್ಸ್ ಸಾಗಾಟ!!

ಬೆಂಗಳೂರು:

     ಮದುವೆ ಆಮಂತ್ರಣ ಪತ್ರಿಕೆಯೊಳಗೆ ನಿಷೇಧಿತ “ಎಫೆಡ್ರೈನ್” ಎಂಬ ನಿಷೇಧಿತ ಮಾದಕ ವಸ್ತುವನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ವೇಳೆ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಗಿದೆ.

     ಫೆ.21 ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರಕುಗಳನ್ನು ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಅಬಕಾರಿ ಅಧಿಕಾರಿಗಳು ಆಮಂತ್ರಣ ಪತ್ರಿಕೆಯೊಳಗೆ ಸುಮಾರು 5 ಕೋಟಿ ರೂ. ಮೌಲ್ಯದ 5 ಕೆಜಿ ತೂಕದ ಎಫೆಡ್ರಿನ್ ಪತ್ತೆ ಮಾಡಿದ್ದಾರೆ.

      ಆ ಆಮಂತ್ರಣ ಪತ್ರಿಕೆಯನ್ನು ಕಾರ್ಡ್ ಬೋರ್ಡ್ ನಿಂದ ತಯಾರಿಸಿದ್ದು, ಅದರೊಳಗೆ ಎರಡು ಭಾಗ ಮಾಡಲಾಗಿದೆ, ಒಂದರಲ್ಲಿ ಪಾಲಿಥೀನ್ ಪೌಚ್ ಗಳಲ್ಲಿ ಬಿಳಿ ಕ್ರಿಸ್ಟಲಿನ್ ಪುಡಿಯನ್ನು ಇಡಲಾಗಿದೆ. ಒಟ್ಟು 43 ಮದುವೆ ಕಾರ್ಡ್ ನಲ್ಲಿ 86 ಪಾಲಿಥೀನ್ ಪೌಚ್ ಗಳನ್ನು ಇಟ್ಟಿರುವುದು ಕಂಡುಬಂದಿದೆ. ಈ ಪೌಡರ್ ಪರಿಶೀಲನೆಗೆ ಒಳಪಡಿಸಿದಾಗ ಮಾದಕ ವಸ್ತು ಎನ್ನುವುದು ದೃಡಪಟ್ಟಿದೆ. ಇದರ ಮೌಲ್ಯ 5.05 ಕೋಟಿ‌ ರೂಪಾಯಿ ಎಂದು ಅಂದಾಜಿಸಲಾಗಿದೆ.

      ಅತ್ಯಂತ ವ್ಯವಸ್ಥಿತವಾಗಿ ಸಿದ್ಧಪಡಿಸಲಾದ ಈ ಆಹ್ವಾನ ಪತ್ರಿಕೆ ಆಕರ್ಷಣೀಯವಾಗಿದ್ದು, ಎರಡೂ ಮಡಿಕೆಗಳನ್ನು ಹೊಂದಿದೆ. ಪ್ರತಿಯೊಂದು ಭಾಗದಲ್ಲೂ ತಲಾ 60 ಗ್ರಾಂ ಎಫೆಡ್ರಿನ್ ಪುಡಿಯನ್ನು ತೆಳ್ಳಗೆ ಪೇಪರ್ ಆಕೃತಿಯಲ್ಲೇ ಹರಡಿ ಅಡಗಿಸಿಡಲಾಗಿದೆ.

      ಕಸ್ಟಮ್ಸ್‌ ಏರ್‌ ಕಾರ್ಗೋದ ಗುಪ್ತಚರ ವಿಭಾಗದ ಅಧಿಕಾರಿಗಳಿಗೆ ಸಿಕ್ಕ ಸುಳಿವಿನ ಆಧಾರದಲ್ಲಿ ಶುಕ್ರವಾರ ಕಾರ್ಗೋ ಮೂಲಕ ಬಂದ ಸರಕು ತಪಾಸಣೆ ವೇಳೆ ಆಮಂತ್ರಣ ಪತ್ರಿಕೆಗಳ ಜೊತೆ ಇದ್ದ ಪೌಚ್‌ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap