ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ವೇಳೆಯೇ ಹಿರಿಯ ಪೋಷಕರ ನಟ ರಾಕ್ಲೈನ್ ಸುಧಾಕರ್ ಕೂಡಾ ಇಹಲೋಕ ತ್ಯಜಿಸಿದ್ದಾರೆ.
ಕನ್ನಡದ ಹಲವು ಸಿನಿಮಾಗಳಲ್ಲಿ ಪೋಷಕ ಹಾಗೂ ಹಾಸ್ಯಭರಿತ ಪಾತ್ರಗಳಲ್ಲಿ ಅಭಿನಯಿಸಿದ್ದ ರಾಕ್ ಲೈನ್ ಸುಧಾಕರ್ ಸಿಂಪಲ್ ಸುನಿ ನಿರ್ದೇಶನದ ಚಿತ್ರದ ಶೂಟಿಂಗ್ ಒಂದರಲ್ಲಿ ಸುಧಾಕರ್ ಭಾಗಿಯಾಗಿದ್ದರು.
ಮೇಕಪ್ ಹಚ್ಚಿ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಸುನಿ, 2020ರ ರೌದ್ರಾವತಾರ ಮುಂದುವರೆದಿದೆ. ಸಿನಿ ಕಲಾವಿದರಾದ ರಾಕ್ ಲೈನ್ ಸುಧಾಕರ್ ಇಂದು ಮೇಕಪ್ ಹಚ್ಚಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದು ಕರೆಸಿಕೊಂಡಿರುವ ರಾಕ್ಲೈನ್ ವೆಂಕಟೇಶ್ ಜೊತೆ ಹಲವು ವರ್ಷಗಳು ಕೆಲಸ ಮಾಡಿದ್ದ ಕಾರಣ ಅವರಿಗೆ ರಾಕ್ಲೈನ್ ಸುಧಾಕರ್ ಎಂಬ ಹೆಸರು ಬಂದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








