ನಾಲ್ಕನೆ ಬಾರಿಯೂ SIT ವಿಚಾರಣೆಗೆ ರೋಷನ್ ಬೇಗ್ ಗೈರು!!

ಬೆಂಗಳೂರು:

       ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಇಂದೂ ಕೂಡ ಎಸ್​ಐಟಿ ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

       ಮನ್ಸೂರ್ ಖಾನ್ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ರೋಷನ್ ಬೇಗ್ ಕೋಟಿ ಕೋಟಿ ಹಣ ಪಡೆದಿರುವ ವಿಚಾರದ ಬಗ್ಗೆ ಮಾತನಾಡಿದ್ದ. ಹೀಗಾಗಿ ವಿಚಾರಣೆ ನಡೆಸಲು ನಾಲ್ಕನೇ ಬಾರಿಗೆ ಎಸ್ಐಟಿ ನೋಟಿಸ್ ಜಾರಿ‌ ಮಾಡಿತ್ತು. ಈ ಹಿಂದೆ ಮೂರು ನೋಟಿಸ್​ಗಳಿಗೂ ಕೂಡ ಅನಾರೋಗ್ಯ ಕಾರಣ ಹೇಳಿ ರೋಷನ್ ಬೇಗ್ ವಿಚಾರಣೆಗೆ ಗೈರಾಗಿದ್ದರು. ಈಗಲೂ ಸಹಾ ಯಾವುದೇ ಕಾರಣ ನೀಡದೇ ವಿಚಾರಣೆಗೆ ಗೈರು ಆಗಿದ್ದಾರೆ.

        ಸತತ ನಾಲ್ಕು ಬಾರಿ ನೋಟೀಸ್ ನೀಡಿದ್ದರೂ, ರೋಷನ್ ಬೇಗ್ ಮಾತ್ರ ಎಸ್ ಐ ಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿಲ್ಲ. ಯಾವುದೇ ಕಾರಣ ಕೂಡ ನೀಡಿಲ್ಲ. ಹೀಗಾಗಿ ಮುಂದಿನ ವಿಚಾರಣೆ ವೇಳೆಗೆ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

     

Recent Articles

spot_img

Related Stories

Share via
Copy link
Powered by Social Snap