SSLC ಪರೀಕ್ಷೆ ಬರೆಯುತ್ತಿದ್ದ 9 ನಕಲಿ ವಿದ್ಯಾರ್ಥಿಗಳು ಅರೆಸ್ಟ್!!!

ಧಾರವಾಡ: 

      ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಅಭ್ಯರ್ಥಿ ಬದಲಾಗಿ ಪರೀಕ್ಷೆ ಬರೆಯುತ್ತಿದ್ದ 9 ನಕಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

      ನಗರದ ಬಾಸೆಲ್‌ ಮಿಷನ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಎಸ್‌ಎಸ್‌ಎಲ್‌ಸಿ ವಿಜ್ಞಾನ ವಿಷಯದ ಪೂರಕ ಪರೀಕ್ಷೆ ನಡೆಯುತ್ತಿತ್ತು. ತಾಲೂಕಿನ ಮೊರಬ ಗ್ರಾಮದ ಚಿದಾನಂದ ಕಾಳಪ್ಪ ಕಮ್ಮಾರ ಬದಲಿಗೆ ಶಿವರಾಜ ಮುತ್ತಣ್ಣ ಜಾಲಿಹಾಳ, ಸಂಗ್ರೇಸಕೊಪ್ಪದ ಭೀಮಪ್ಪ ತಂದೆ ಮಡಿವಾಳಪ್ಪ ಕರಿಕಟ್ಟಿ ಬದಲಿಗೆ ಫಕ್ಕೀರಪ್ಪ ಬಸಪ್ಪ ಬಡಕಣ್ಣವರ, ಶಿರಕೋಳದ ಭೀಮಪ್ಪ ಸೋಮಪ್ಪ ನಾಯ್ಕರ ಬದಲಿಗೆ ಚಿದಾನಂದ ಶಿವಪ್ಪಾ ನವಲಗುಂದ, ಕುರವಿನಕೊಪ್ಪದ ಬಸವರಾಜ ವಿರುಪಾಕ್ಷ ಪ್ಪಾ ಧಾರವಾಡ ಬದಲಿಗೆ ಮಹೇಶ ದ್ಯಾಮಣ್ಣಾ ಪಾಟೀಲ, ಕೊಟಬಾಗಿಯ ಸಂಜು ಹನುಮಂತಪ್ಪಾ ಹಂಚಿನಮನಿ ಬದಲಿಗೆ ಪ್ರವೀಣ ಮಲ್ಲಿಕಾರ್ಜುನ ಹಂಚಿನಮನಿ, ಮೊರಬದ ಸಲೀಂ ಸಿದ್ದಿಲಾಲ ಮೊಖಾಶಿ ಬದಲಿಗೆ ಮೈಲಾರಪ್ಪಾ ಯೋಗಪ್ಪಾ ಗೋಲನಾಯ್ಕರ, ಮಹಾವೀರ ಯೋಗಪ್ಪಾ ಸತ್ತೂರ ಬದಲಿಗೆ ನಿಂಗಪ್ಪಾ ಗಂಗಪ್ಪಾ ಕಂಬಳಿ, ಸಂಗ್ರೆಸಕೊಪ್ಪದ ಪ್ರಶಾಂತಯ್ಯಾ ಶಿವಬಸಯ್ಯಾ ಚಿಕ್ಕಮಠ ಬದಲಿಗೆ ಅನೀಲ ಶಿವಬಯ್ಯಾ ಚಿಕ್ಕಮಠ, ಶಿರಗುಪ್ಪಿಯ ದೇವೇಂದ್ರಪ್ಪ ನಿಂಗಪ್ಪಯರಗುಪ್ಪಿ ಬದಲಿಗೆ ಮಂಜುನಾಥ ಶಿವಪ್ಪಾ ಕರೆಮನಿ ಪರೀಕ್ಷೆ ಬರೆಯುತ್ತಿದ್ದರು. 

      ಆಗ ಪರೀಕ್ಷಾ ಕೇಂದ್ರಕ್ಕೆ ದಿಢೀರ ಭೇಟಿ ನೀಡಿದ ಶಿಕ್ಷ ಣ ಇಲಾಖೆ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಪರಿಶೀಲನೆ ನಡೆಸಿ 7ಜನ ಹಾಗೂ ಶಿಕ್ಷ ಣ ಇಲಾಖೆ ಉಪನಿರ್ದೇಶಕರು (ಅಭಿವೃದ್ಧಿ) 2 ಮಂದಿ ನಕಲಿ ವಿದ್ಯಾರ್ಥಿಗಳನ್ನು ಪತ್ತೆ ಮಾಡಿದ್ದಾರೆ. 

      ಪರೀಕ್ಷಾ ಅಧೀಕ್ಷಕರು, ಕೊಠಡಿ ಮೇಲ್ವಿಚಾರಕರು ಕೊಠಡಿ ಮೇಲ್ವಿಚಾರಕರು ಸೇರಿ ನಾಲ್ವರು ಅಧಿಕಾರಿಗಳನ್ನು ಪರೀಕ್ಷೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದ್ದು, ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.

      ಕರ್ತವ್ಯದಲ್ಲಿದ್ದ ಮುಖ್ಯೋಪಾಧ್ಯಾಯ ಮುತ್ತಪ್ಪ ಪ್ಯಾಟಿ ಅವರು ನೀಡಿದ ದೂರಿನ ಮೇರೆಗೆ 9 ಜನ ನಕಲಿ ಹಾಗೂ 9 ಅಸಲಿ ವಿದ್ಯಾರ್ಥಿಗಳ ಮೇಳೆ ಐಪಿಸಿ ಸೆಕ್ಷನ್‌ 419, 420, ಆರ್‌/ಡಬ್ಲು149 ಹಾಗೂ 1983ರ ಕರ್ನಾಟಕ ಎಜುಕೇಶನ್‌ ಆ್ಯಕ್ಟ್ 118 ಕಲಂಗಳಡಿ ಪ್ರಕರಣ ದಾಖಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap