ಮಗಳ ಆತ್ಮಹತ್ಯೆ : ಪ್ರಿಯಕರನನ್ನು ಚುಚ್ಚಿ ಕೊಂದ ತಂದೆ!!

ಚಿಕ್ಕಬಳ್ಳಾಪುರ:

      ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ತಂದೆ ಹಾಗೂ ಆತನ ಸ್ನೇಹಿತ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಸಮೀಪದ ಯಗಲಮಿಡ್ಡಪಲ್ಲಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

     ಹರೀಶ್ (25) ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್ ಕೊಲೆ ಮಾಡಿರುವ ಆರೋಪಿಗಳು .

      ಕೊಲೆಗೀಡಾಗಿರುವ ಹರೀಶನು ವೆಂಕಟೇಶ್ ಪುತ್ರಿ ಸಿರಿಷಾರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.  ಆದರೆ ಸಿರೀಷಾಳನ್ನು ಕೊಟ್ಟು ಹರೀಶ್‌ಗೆ ಮದುವೆ ಮಾಡಿಕೊಡಲು ವೆಂಕಟೇಶಪ್ಪ ಕುಟುಂಬಕ್ಕೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಕಳೆದ ಹತ್ತು ತಿಂಗಳ ಹಿಂದೆ ಸಿರಿಷಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಳು. ಬಳಿಕ ಹರೀಶ್ ಊರು ಬಿಟ್ಟು ಬೆಂಗಳೂರಿನಲ್ಲಿ ಪೈಟಿಂಗ್ ಕೆಲಸ ಮಾಡಿಕೊಂಡಿದ್ದು ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಬೆಂಗಳೂರಿನಿಂದ ವಾಪಸ್ಸು ಬಂದು ಊರಿನಲ್ಲಿದ್ದ್ದ.

     ತನ್ನ ಮಗಳ ಆತ್ಮಹತ್ಯೆಗೆ ಪ್ರಿಯಕರನೇ ಕಾರಣ ಎಂದು 10 ತಿಂಗಳಿಂದ ಹೊಂಚು ಹಾಕಿದ್ದ ತಂದೆ ವೆಂಕಟೇಶ್ ತಡರಾತ್ರಿ ಸಂಚು ರೂಪಿಸಿ ಕಳೆದ ತನ್ನ ಸ್ನೇಹಿತ ಗಣೇಶ್‌ನೊಂದಿಗೆ ಸೇರಿ ಬೈಕ್‌ನಲ್ಲಿ ಸಂಚರಿಸುವ ವೇಳೆ ಹರೀಶ್‌ ನನ್ನು ಹಿಂಬಾಲಿಸಿ ಚಾಕುವಿನಿಂದ ಎದೆ ಹಾಗೂ ಹೊಟ್ಟೆಯ ಮೇಲೆ ಹಲವಾರು ಬಾರಿ ತಿವಿದು ಕೊಲೆ ಮಾಡಿದ್ದಾರೆ. 

      ಆರೋಪಿಗಳನ್ನು ಬಾಗೇಪಲ್ಲಿ ಸಿಪಿಐ ನಯಾಜ್ ಹಾಗೂ ಪಿಎಸ್‍ಐ ಸುನಿಲ್ ಕುಮಾರ್ ಬಂಧಿಸಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link