ಬೆಂಗಳೂರು :
ಮುಂಬರುವ ಜೂನ್ ನಲ್ಲಿ ತೆರವಾಗಲಿರುವ ವಿಧಾನ ಪರಿಷತ್ ನ ಸ್ಥಾನಕ್ಕೆ ಜೆಡಿಎಸ್ ನಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ತಮಗೆ ಟಿಕೆಟ್ ನೀಡುವಂತೆ ಹಲವು ಮುಖಂಡರು ಪಕ್ಷದ ವರಿಷ್ಟ ಎಚ್.ಡಿ.ದೇವೇಗೌಡ ಅವರ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರ ಅವಧಿ ಜೂನ್ ಗೆ ಮುಕ್ತಾಯವಾಗಲಿದೆ. ಈ ಒಂದು ಸ್ಥಾನಕ್ಕೆ ಈಗಾಗಲೇ ಅನೇಕ ನಾಯಕರು, ಮುಖಂಡರು ಪೈಪೋಟಿಗಿಳಿದಿದ್ದಾರೆ. ಶರವಣ ಅವರು ಮತ್ತೊಮ್ಮೆ ಪರಿಷತ್‍ಗೆ ಆಯ್ಕೆಯಾಗಲು ಬಯಸಿದ್ದಾರೆ. ಇನ್ನು ಶರವಣ ಜೊತೆಗೆ ಬೆಂಗಳೂರು ಘಟಕ ಅಧ್ಯಕ್ಷ ಪ್ರಕಾಶ್, ಮಾಜಿ ಶಾಸಕ ಕೋನರೆಡ್ಡಿ ಸೇರಿ ಹಲವರು ಪೈಪೋಟಿಗಿಳಿದಿದ್ದಾರೆ.
ಯಾವುದೇ ಕಾರಣಕ್ಕೂ ಹೊರಗಡೆಯಿಂದ ಕರೆತಂದು ಈ ಬಾರಿ ಸ್ಥಾನ ಕೊಡಬಾರದು ಎಂದು ಷರತ್ತು ಹಾಕಿರುವ ಪಕ್ಷದ ಕಾರ್ಯಕರ್ತರು, ಒಂದು ವೇಳೆ ಹೊರಗಡೆ ಅವರಿಗೆ ಕೊಟ್ಟರೆ ನಾನು ಸುಮ್ಮನಿರುವುದಿಲ್ಲ ಎಂದು ವರಿಷ್ಠರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಲ್ಲದೇ ಪಕ್ಷದಲ್ಲಿ ದುಡಿಯುವವರಿಗೆ, ಪಕ್ಷದ ಕಾರ್ಯಕರ್ತರಿಗೆ ಮಾತ್ರ ಪರಿಷತ್ ಸ್ಥಾನ ಕೊಡಬೇಕು ಎಂದು ವರಿಷ್ಠರಿಗೆ ಅಹವಾಲು ಸಲ್ಲಿಸಲು ನಿರ್ಧಾರ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ