ಅ.1ರಿಂದ ಸಿನಿಮಾ ಥಿಯೇಟರ್ ಗಳ ಗಳು ರೀ ಓಪನ್..!

ಬೆಂಗಳೂರು: 

     ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ತೆರೆಯುತ್ತವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಮಾಹಿತಿ ನೀಡಿದ್ದಾರೆ.

      ಲಾಕ್‌ಡೌನ್‌ ಕಾರಣದಿಂದ ಚಿತ್ರೀಕರಣ ಹಾಗೂ ಸಿನಿಮಾ ಕಾರ್ಯಕ್ರಮಗಳು ಅಲ್ಲದೇ ಚಿತ್ರಮಂದಿಗಳನ್ನು ಬಂದ್‌ ಆಗಿದ್ವು. ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದರೂ, ಚಿತ್ರಮಂದಿರಗಳಿನ್ನೂ ಓಪನ್ ಆಗಿಲ್ಲ. ಸಧ್ಯ ಸಿನಿ ಪ್ರೇಮಿಗಳಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಗುಡ್ ನ್ಯೂಸ್ ನೀಡಿದ್ದಾರೆ.

     ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದಂತೆ ದೇಶಾದ್ಯಂತ ಚಿತ್ರಮಂದಿರಗಳನ್ನು ಬಂದ್ ಮಾಡಲಾಯ್ತು. ಕಳೆದ 1 ತಿಂಗಳಿಂದ ಚಿತ್ರೀಕರಣ ಚಟುವಟಿಕೆಗಳು ಆರಂಭವಾದರೂ ಚಿತ್ರಮಂದಿರಗಳು ಮಾತ್ರ ತೆರೆದಿರಲಿಲ್ಲ.  

     ನಿನ್ನೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂಮ್ ಆಯಪ್ ಮೂಲಕ ಮೀಟಿಂಗ್ ಮಾಡಿ ಚಿತ್ರಮಂದಿರ ರೀ ಓಪನ್ ಮಾಡುವುದು ಹಾಗೂ ಸಂಬಂಧಿಸಿದ ಗೈಡ್‌ಲೈನ್ಸ್ ಬಗ್ಗೆ ಚರ್ಚಿಸಿದ್ದಾರೆ. ಅದ್ರಂತೆ, ಸೆಪ್ಟೆಂಬರ್ ಕೊನೇ ವಾರದಲ್ಲಿ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಲು ಗೈಡ್‌ಲೈನ್ಸ್ ನೀಡಲಾಗುತ್ತದೆ. ಅಕ್ಟೋಬರ್‌ 1ರಂದು ರೀ ಓಪನ್ ಮಾಡಲು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap