ಬೆಂಗಳೂರು:
ಜಿಮ್ ಟ್ರೈನರ್ ಮಾರುತಿಗೌಡ ಮೇಲಿನ ಹಲ್ಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ನಟ ದುನಿಯಾ ವಿಜಿ ಬಂಧನ
ಎಸಿಎಂಎಂ ಕೋರ್ಟ್ ನಲ್ಲಿ ಜಾಮೀನು ತಿರಸ್ಕೃತಗೊಂಡಿದ್ದರಿಂದ ವಿಜಯ್ ಮತ್ತು ಸಹಚರರು ಸೆಷನ್ಸ್ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್, ತೀರ್ಪುನ್ನ ಇವತ್ತಿಗೆ ಕಾಯ್ದಿರಿಸಿತ್ತು. ಇದೀಗ ಸೆಷನ್ಸ್ ಕೋರ್ಟ್ ದುನಿಯಾ ವಿಜಯ್ ಆ್ಯಂಡ್ ಟೀಂಗೆ ಜಾಮೀನು ಮಂಜೂರು ಮಾಡಿದೆ.
ವಿಜಿಗೆ ಇಂದಾದರೂ ಜಾಮೀನು ಸಿಗುತ್ತಾ..!?
ದುನಿಯಾ ವಿಜಿ ಮತ್ತು ಸ್ನೇಹಿತರು ಸೆಷನ್ಸ್ ಕೋರ್ಟ್ ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ಪುರಸ್ಕರಿಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಇಬ್ಬರು ಶ್ಯೂರಟಿ ನೀಡಿದ್ದು 1 ಲಕ್ಷ ಬಾಂಡ್ ನೀಡಲಾಗಿದೆ.
ಯಾವುದೇ ಕಾರಣಕ್ಕೂ ಪ್ರಭಾವ ಬೀರಿ ಸಾಕ್ಷಿ ನಾಶ ಪಡಿಸವಂತಿಲ್ಲ. ಅವಶ್ಯವಿದ್ದಾಗ ವಿಚಾರಣೆಗೆ ಹಾಜರಾಗಬೇಕು ಎನ್ನುವ ಕೆಲ ಷರತ್ತುಗಳನ್ನು ಹಾಕಲಾಗಿದೆ.
ಕಿವಿಮಾತು ಹೇಳಿದ ನ್ಯಾಯಾಧೀಶರು:
ಮಾಧ್ಯಮಗಳಿವೆ ಎಚ್ಚರಿಕೆಯಿಂದ ವರ್ತಿಸಲಿ. ಹೀರೋ ಬೇರೆಯವರಿಗೆ ರೋಲ್ ಮಾಡೆಲ್ ಆಗಿರಬೇಕು. ನಟ ವಿಜಯ್ ಹೀಗೆಲ್ಲಾ ಮಾಡುವುದು ಸರಿಯಲ್ಲ. ಸಲೆಬ್ರೆಟಿಗಳು ಹೇಗೆಂದರೆ ಹಾಗೆ ವರ್ತಿಸುವುದಲ್ಲ. ಜಾಮೀನು ನೀಡಿದ್ದೇನೆ, ಮುಂದೆ ಹೀಗೆ ವರ್ತಿಸಬಾರದು ಎಂದು ದುನಿಯಾ ವಿಜಯ್ ಪರ ವಕೀಲರಿಗೆ ನ್ಯಾಯಾಧೀಶರು ಮೌಖಿಕವಾಗಿ ಕಿವಿಮಾತು ಹೇಳಿದ ಪ್ರಸಂಗ ನಡೆಯಿತು.
ಸದ್ಯ, ಜಾಮೀನು ಆದೇಶದ ಪ್ರತಿ ಪಡೆದುಕೊಳ್ಳುವ ವಿಜಯ್ ಪರ ವಕೀಲರು, ಇಂದೇ ಸೆಂಟ್ರೆಲ್ ಜೈಲ್ ಗೆ ಆದೇಶದ ಪ್ರತಿ ತಲುಪಿಸುವಂತಹ ತಯಾರಿ ನಡೆಸಿದ್ದಾರೆ. ಜಾಮೀನು ಪ್ರಕ್ರಿಯೆ ಮುಗಿದರೇ ಇಂದು ಜೈಲಿನಿಂದ ಬಿಡುಗಡೆಯಾಗವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ