ಬೆಂಗಳೂರು :
ಹುಟ್ಟುಹಬ್ಬದ ದಿನದಂದೇ ತಲ್ವಾರ್ನಿಂದ ಕೇಕ್ ಕತ್ತರಿಸಿ ಸುದ್ದಿಯಾಗಿದ್ದ ನಟ ದುನಿಯಾ ವಿಜಯ್ ವಿರುದ್ಧ ಗಿರಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ
ನಟ ದುನಿಯಾ ವಿಜಯ್ ಅವರು ಕಳೆದ ಇತ್ತೀಚಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ಕೇಕ್ ಅನ್ನು ಅಭಿಮಾನಿಗಳು ನೀಡಿದ ತಲ್ವಾರ್ ನಿಂದ ಕಟ್ ಮಾಡಿದ್ದರು. ಇದು ಎಲ್ಲರ ಕೆಂಗಣ್ಣಿಗೆ, ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಸಂಬಂಧ ನಟ ದುನಿಯಾ ವಿಜಯ್ ಆ ದಿನವೇ ಅಭಿಮಾನಿಗಳು ನೀಡಿದ ತಲ್ವಾರ್ ನಿಂದ ಕೇಕ್ ಕಟ್ ಮಾಡಲಾಗಿತ್ತು. ಅದರ ಹೊರತಾಗಿ ಯಾವುದೇ ದುರುದ್ದೇಶ ಇರಲಿಲ್ಲ ಎಂಬುದಾಗಿ ಹೇಳಿದ್ದರು. ಜೊತೆಗೆ ಸಾರ್ವಜನಿಕರ ಕ್ಷಮೆಯನ್ನು ಕೋರಿದ್ದರು.
ಇದರ ಜೊತೆಗೆ ಬರ್ತ್ ಡೇ ವೇಳೆ ವಿಜಯ್ ಮನೆ ಅಕ್ಕಪಕ್ಕದವರು ಕೂಡ ಪೊಲೀಸ್ ಕಮೀಷನರ್ಗೆ ದೂರು ನೀಡಿದ್ದರು. ಅಕ್ರಮವಾಗಿ ರಸ್ತೆ ಬಂದ್ ಮಾಡಿಕೊಂಡು ಮ್ಯೂಸಿಕ್ ಹಾಕಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟುಮಾಡಿದ್ದಾರೆ ಎಂದು ದೂರು ನೀಡಿದ್ದರು.
ಈ ಎಲ್ಲಾ ಘಟನೆಗಳ ಅಧಾರದ ಮೇಲೆ ತನಿಖೆ ನಡೆಸಿದ ಗಿರಿನಗರ ಪೊಲೀಸರು ಆರ್ಮ್ಸ್ ಆಕ್ಟ್ ಮತ್ತು 283 (ಸಾರ್ವಜನಿಕರ ಶಾಂತಿಗೆ ಭಂಗ ಮಾಡಿದ ಮತ್ತು ಅನುಮತಿ ಇಲ್ಲದೇ ರಸ್ತೆ ಬಂದ್ ಮಾಡಿದ) ಆರೋಪದಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ