ರಾಮನಗರ:
ಅಗ್ನಿಕೊಂಡ ಹಾಯುವಾಗ ಉರುಳಿಬಿದ್ದು 8 ಜನ ಗಾಯಗೊಂಡರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಬಳಿ ನಡೆದಿದೆ.
ಸೋಮವಾರ ರಾತ್ರಿ10.30ರಲ್ಲಿ ಕುದೂರಿನ ಲಕ್ಷ್ಮೀದೇವಿ ಅಗ್ನಿಕೊಂಡ ಹಾಯುವಾಗ ಪೂಜಾರಿ ಜೊತೆಗೆ ಅಗ್ನಿಕುಂಡದಲ್ಲಿ 56 ಜನ ಹರಕೆ ಹೊತ್ತ ಭಕ್ತರು ಕೊಂಡಕ್ಕೆ ಇಳಿದರು.
ರಮೇಶ್ ಎಂಬುವರು ಕೆಂಡದ ಮೇಲೆ ನಡೆಯುವಾಗ ಉರುಳಿಬಿದ್ದು ಗಂಭೀರವಾಗಿ ಗಾಯಗೊಂಡರು. ಉಳಿದವರಿಗೂ ಸಣ್ಣಪುಟ್ಟ ಗಾಯಗಳಾದವು. ರಮೇಶ್ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ