ಬೆಂಗಳೂರು :
ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ನೋಡ ನೋಡುತ್ತಿದ್ದಂತೆಯೇ ಫ್ಯಾಕ್ಟರಿ ಸಂಪೂರ್ಣ ಹೊತ್ತಿ ಉರಿದ ಘಟನೆ ಬೆಂಗಳೂರಿನ ಹೊಸಗುಡ್ಡದಹಳ್ಳಿಯಲ್ಲಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಫ್ಯಾಕ್ಟರಿಯಿಂದ ಹೊರ ಬರುತ್ತಿರುವ ಕೆನ್ನಾಲಿಗೆ, ಕಿಡಿಗಳು ಅಕ್ಕ ಪಕ್ಕದ ಮನೆಗಳಿಗೂ ಹೊತ್ತಿಕೊಳ್ಳುತ್ತಿದೆ. ಇದರಿಂದಾಗಿ ಫ್ಯಾಕ್ಟರಿ ಸಮೀಪದ ಮನೆಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆದಿದೆ.
ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಆಗಮಿಸಿರುವಂತ ಅಗ್ನಿ ಶಾಮಕ ಸಿಬ್ಬಂದಿಗಳು, ಬೃಹತ್ ಪ್ರಮಾಣದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ. ಫ್ಯಾಕ್ಟರಿ ಸಮೀಪದ ರಸ್ತೆಯೆಲ್ಲಾ ಬೆಂಕಿಮಯವಾಗಿದ್ದು, ಫ್ಯಾಕ್ಟರಿ ಸಮೀಪದ ಇಡೀ ಏರಿಯಾವೇ ಹೊಗೆಯಿಂದ ಆವರಿಸಿ ಹೋಗಿದೆ.
ಕಾರ್ಖಾನೆಯಲ್ಲಿ ಅಗ್ನಿ ಅಪಘಡ ಸಂಭವಿಸಿದ ವೇಳೆ ಒಳಗೆ ನಾಲ್ಕು ಜನ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಸಿಲಿಂಡರ್ ಬ್ಲಾಸ್ಟ್ ಆಗುತ್ತಿದ್ದಂತೆ ಅವರು ಕಾರ್ಖಾನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎನ್ನಲಾಗುತ್ತಿದೆ. ಈ ನಡುವೆ ಬೆಂಕಿಯ ಕೆನ್ನಾಲಿಗೆಗೆ ಅನೇಕ ವಾಹನಗಳು ಆಹುತಿಯಾಗಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ