ಷೋರೂಂ ಗೆ ಬೆಂಕಿ : ಬೈಕ್ ಗಳು ಸುಟ್ಟು ಕರಕಲು!!

ಉಡುಪಿ:

      ಉಡುಪಿಯ ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ದ್ವಿಚಕ್ರ ವಾಹನ ಶೋ ರೂಂಗೆ ಬೆಂಕಿ ತಗುಲಿ ನೂರಾರು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.

      ಕಟ್ಟಡದ ಮೊದಲ ಮಹಡಿಯಲ್ಲಿ ವೆಸ್ಪಾ ಕಂಪನಿಯ ದ್ವಿಚಕ್ರವಾಹನಗಳ ಶೋ ರೂಂ ಇದ್ದು, ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದೆ ಎನ್ನಲಾಗಿದೆ. ಕ್ಷಣಾರ್ಧದಲ್ಲೇ ಬೆಂಕಿ ವ್ಯಾಪಿಸಿದ್ದು, ಧಗಧಗನೆ ಹೊತ್ತಿ ಉರಿದಿದೆ. ಶೋ ರೂಂನಲ್ಲಿದ್ದ ದ್ವಿಚಕ್ರವಾಹನಗಳು ಸುಟ್ಟು ಕರಕರಲಾಗಿವೆ.

      ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ 3 ವಾಹನಗಳಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಯನ್ನು ತಡರಾತ್ರಿಯವರೆಗೂ ಮುಂದುವರಿಸಿದ್ದಾರೆ.

      ಬೆಂಕಿ ತಗುಲಿದ ಕಟ್ಟಡಕ್ಕೆ ಹೊಂದಿಕೊಂಡಂತೆ ಪೆಟ್ರೋಲ್ ಬಂಕ್, ಜನ ವಸತಿ ಸಮುಚ್ಛಯಗಳು ಇದ್ದು, ಬೆಂಕಿ ವ್ಯಾಪಿಸದಂತೆ ಕ್ರಮಕೈಗೊಂಡು ಬೆಂಕಿಯನ್ನು ನಂದಿಸಲಾಗಿದೆ.

      ಅಗ್ನಿ ಅವಘಡದಲ್ಲಿ ಹೊಸ ದ್ವಿಚಕ್ರವಾಹನಗಳು, ಸರ್ವೀಸ್ ಗೆ ಬಂದಿದ್ದ ವಾಹನಗಳು ಸುಟ್ಟು ಹೋಗಿದ್ದು, ಅಪಾರ ನಷ್ಟವಾಗಿದೆ. ಇದರಿಂದ ಕೋಟ್ಯಾಂತರ ರೂ. ನಷ್ಟ ಅಂದಾಜಿಸಲಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

 

Recent Articles

spot_img

Related Stories

Share via
Copy link