ರಾಯಚೂರು : ಲಾರಿಗೆ ಬೆಂಕಿ, ಚಾಲಕ ಸುಟ್ಟು ಭಸ್ಮ!!!

ರಾಯಚೂರು: 

      ಲಾರಿಗೆ ಬೆಂಕಿ ಹೊತ್ತಿಕೊಂಡು‌ ಲಾರಿ ಮತ್ತು ಚಾಲಕ ಸುಟ್ಟು ಭಸ್ಮವಾಗಿರುವ ಘಟನೆ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

      ಕುಷ್ಟಗಿ ಮೂಲದ ಬಾಲಾಜಿ(25) ಮೃತ ಚಾಲಕ. ಬಳ್ಳಾರಿ ಜಿಲ್ಲೆಯ ಮರಿಯಮ್ಮನ  ಹಳ್ಳಿಯಿಂದ ತೆಲಂಗಾಣದ ಶಾದ್ ನಗರಕ್ಕೆ ಜಲ್ಲಿ ಕಲ್ಲುಗಳನ್ನು ತುಂಬಿಕೊಂಡು ಲಾರಿ ಹೊರಟಿತ್ತು. ಈ ವೇಳೆ ಲಾರಿಗೆ ಬೆಂಕಿ ಕಾಣಿಸಿಕೊಂಡು, ಬೆಂಕಿಯಿಂದ ಲಾರಿ ಹೊತ್ತಿ ಉರಿದಿದೆ. ಲಾರಿಯಲ್ಲಿದ್ದ ಚಾಲಕ ಸುಟ್ಟು ಭಸ್ಮವಾಗಿದ್ದಾನೆ.

     ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ