ಬೆಂಗಳೂರು :
ರಾಜ್ಯದಲ್ಲಿ ದೀಪಾವಳಿಯಂದು ಪಟಾಕಿಯ ಜೊತೆಗೆ ಸಂಭ್ರಮಿಸುವಂತ ಸಂಭ್ರಮಕ್ಕೆ, ಇದೀಗ ರಾಜ್ಯ ಸರ್ಕಾರ ನಿಷೇಧ ಹೇರಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ದೀಪಾವಳಿ ಹಬ್ಬದ ವೇಳೆ ಪಟಾಕಿ ಮಾರುವಂತಿಲ್ಲ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಪಟಾಕಿ ನಿಷೇಧಿಸಲು ಮಹತ್ವದ ತೀರ್ಮಾನ ತೆಗೆದುಕೊಳ್ಳಲಿದ್ದು, ದೀಪಾವಳಿಗೆ ರಾಜ್ಯದಲ್ಲಿ ಎಲ್ಲಿಯೂ ಪಟಾಕಿ ಹೊಡೆಯಬಾರದು ಎಂದು ಶೀಘ್ರದಲ್ಲೇ ನೋಟಿಫಿಕೇಶನ್ ಹೊರಡಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಕೋವಿಡ್-19 ನಿರ್ವಹಣೆಗೆ ನೇಮಿಸಲಾಗಿರುವ ತಾಂತ್ರಿಕ ಸಮಿತಿಯ ಸದಸ್ಯರು ಈಗಾಗಲೇ ದೀಪಾವಳಿಯಂದು ಪಟಾಕಿ ನಿಷೇಧದ ಕುರಿತಂತೆ ಸಭೆ ನಡೆಸಲಾಗಿದೆ.
ಈ ಸಮಿತಿ ವರದಿ ನೀಡಿದ್ದು, ಕೋವಿಡ್-19 ರೋಗಿಗಳ ಶ್ವಾಸಕೋಶದ ಮೇಲೆ ಪಟಾಕಿಯಿಂದ ಉಂಟಾಗುವ ಮಾಲಿನ್ಯವು ಪರಿಣಾಮ ಬೀರಲಿದೆ. ಚೇತರಿಸಿಕೊಳ್ಳುತ್ತಿರುವಂತ ಕೊರೋನಾ ರೋಗಿಗಳ ಆರೋಗ್ಯದ ಮೇಲೂ ತೊಂದರೆ ಉಂಟು ಮಾಡಲಿದೆ. ಹೀಗಾಗಿ ಪಟಾಕಿ ನಿಷೇಧಿಸುವಂತೆ ವರದಿಯಲ್ಲಿ ತಿಳಿಸಿದೆ.
ಈ ಕಾರಣದಿಂದ ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಹರಿಯಾಣ ರಾಜ್ಯಗಳು ಕೊರೋನಾ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ದೀಪಾವಳಿಯಂದು ಪಟಾಕಿ ಮಾರಾಟ, ಹಚ್ಚೋದಕ್ಕೆ ನಿಷೇಧ ಹೇರಿದೆ. ಇದೇ ಹಾದಿಯನ್ನು ಹಿಡಿದಿರುವ ರಾಜ್ಯ ಸರ್ಕಾರ, ದೀಪಾವಳಿಯಂದು ರಾಜ್ಯದಲ್ಲೂ ಪಟಾಕಿ ನಿಷೇಧಿಸುವಂತ ಮಹತ್ವದ ನಿರ್ಧರವನ್ನು ಕೈಗೊಂಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ