ಶಿವಮೊಗ್ಗ : ಕೊರೊನಾ ಮಹಾಮಾರಿಗೆ ಮೊದಲ ಬಲಿ!!

ಶಿವಮೊಗ್ಗ: 

      ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ‌ ಮೊದಲ ಬಲಿ ಪಡೆದಿದೆ‌. 

      ದಾವಣಗೆರೆ ಜಿಲ್ಲೆ ಚನ್ನಗಿರಿ ಮೂಲದ 70 ವರ್ಷದ ವೃದ್ಧೆ ಮೂಲವ್ಯಾಧಿ ಹಾಗೂ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗೆಂದು ಕಳೆದ ಮೂರು ದಿನದ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ಸ್ವತಃ ಅವರೇ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ವೃದ್ಧೆ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.

      ಆದರೆ ಈ ವೃದ್ಧೆ ಸಾವನ್ನಪ್ಪುವ ಮೊದಲೇ ಇವರಿಗೆ ಕೋವಿಡ್ 19 ತಪಾಸಣೆ ಸಹ ನಡೆಸಲಾಗಿತ್ತು.ಈ ವೇಳೆ ವರದಿ ಪಾಸಿಟೀವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದ ಮೊದಲ ಘಟನೆಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap