ಆಟೋಗೆ ಲಾರಿ ಡಿಕ್ಕಿ : 5 ಜನರ ದುರ್ಮರಣ!!

ವಿಜಯಪುರ:

     ಟಂಟಂ ಆಟೋ ಮತ್ತು ಲಾರಿ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸೇರಿದಂತೆ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ದುರ್ಘಟನೆಯೊಂದು ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ಬರಟಗಿ ತಾಂಡಾ ಬಳಿ ಶುಕ್ರವಾರ ಸಂಜೆ ನಡೆದಿದೆ.

      ಟಂಟಂ ಚಾಲಕ ಅರವಿಂದ ಅಗಸರ (32) ಪತ್ನಿ ಸುನಿತಾ ಅಗಸರ (28), ಗಂಗವ್ವ ಬಸಪ್ಪ ಅಗಸರ (49) ಸೃಷ್ಟಿ(6), ವಿನಯಾ (5) ಮೃತಪಟ್ಟವರು. 2 ವರ್ಷದ ಬಾಲಕ ಮಲ್ಲಿಕಾರ್ಜುನ ತೀವ್ರ ಗಾಯಗೊಂಡಿದ್ದು, ಆತನನ್ನು ವಿಜಯಪುರದ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

      ಮೃತರು ಬಸವನ ಬಾಗೇವಾಡಿ ತಾಲೂಕಿನ ಡೋಣೂರ ಗ್ರಾಮದವರು. ಡಿಕ್ಕಿಯ ರಭಸಕ್ಕೆ ಟಂಟಂ ಸಂಪೂರ್ಣ ಜಖಂಗೊಂಡಿದೆ. 

      ಲಾರಿ ಚಾಲಕನ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣ ಎನ್ನಲಾಗಿದೆ. ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap