ಸುಬ್ರಹ್ಮಣ್ಯ:
ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹರಿಯುತ್ತಿರುವ ಕುಮಾರಧಾರ ನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಕ್ಷೇತ್ರದ ಸ್ನಾನ ಘಟ್ಟ ನೆರೆಯಿಂದಾಗಿ ಸಂಪೂರ್ಣ ಮುಳುಗಡೆಗೊಂಡಿದೆ.
ಘಟ್ಟದ ಮೇಲೆ ಹಾಗೂ ಸ್ಥಳೀಯವಾಗಿ ಭಾರಿ ಮಳೆ ಆದ ಕಾರಣ ಇದೇ ಮೊದಲ ಭಾರಿಗೆ ಈ ವರ್ಷ ಮುಳುಗಡೆಗೊಂಡಿದೆ.
ನಾಗರ ಪಂಚಮಿ ದಿನದಿಂದ ಮಳೆ ಈ ಭಾಗದಲ್ಲಿ ವ್ಯಾಪಕಗೊಂಡಿದ್ದು ಪಂಚಮಿ ಮರು ದಿನವೇ ಕುಮಾರಾಧಾರ ನದಿಯಲ್ಲಿ ನೆರೆ ಅಪಾರ ಪ್ರಮಾಣದಲ್ಲಿ ಕಾಣಿಸಿಕೊಂಡು ಹರಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
