ಈ ಕಾಯಿಲೆಯಿಂದಾಗಿ ಮಲೆನಾಡಿನ ಪ್ರವಾಸಿ ತಾಣಗಳು ಬಂದ್!!

ಚಿಕ್ಕಮಗಳೂರು:

      ಮಂಗನ ಕಾಯಿಲೆಯಿಂದ ಬೇಸತ್ತ ಅರಣ್ಯ ಇಲಾಖೆ ಚಿಕ್ಕಮಗಳೂರಿನ ಹಲವು ಪ್ರವಾಸಿ ತಾಣಗಳಲ್ಲಿ ಟ್ರಕ್ಕಿಂಗ್ ನ್ನು ನಿಷೇಧಿಸಿ ಆದೇಶ ಹೊರಡಿಸಿದೆ. 

     ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಈ ಮಹಾಮಾರಿಗೆ 1993 ರಿಂದ 1995ರ ಅವಧಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ ಆ ಹೆಮ್ಮಾರಿ ರೋಗ ಬರುವ ಸೂಚನೆ ಸಿಕ್ಕಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ. 

Image result for chikkamagaluru

 

     ಚಿಕ್ಕಮಗಳೂರು, ಕಾರ್ಕಳ ವಿಭಾಗಕ್ಕೆ ಒಳಪಡುವ ಕುದುರೆಮುಖ ಗಿರಿಶ್ರೇಣಿ, ಕೂಡಲ್ ಫಾಲ್ಸ್ , ಕುರೆಂಜಲ್ ಗಿರಿಶ್ರೇಣಿ, ಕೊಡಚಾದ್ರಿ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್ ನಿಷೇಧಿಸಿದೆ. ಜನವರಿ 21 ರಿಂದ ಜುಲೈ ಆರಂಭಗೊಳ್ಳುವ ಮಳೆಗಾಲದವರೆಗೆ ಈ ಆದೇಶವನ್ನು ಹೊರಡಿಸಲಾಗಿದ್ದು, ಟ್ರಕ್ಕಿಂಗ್ ಮಾಡುವುದರಿಂದ ಅರಣ್ಯಭಾಗದಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸುವ ಸಲುವಾಗಿಯೂ ಈ ಆದೇಶವನ್ನು ಪಾಲಿಸಲಾಗುತ್ತಿದೆ. 

      ಇದರಿಂದಾಗಿ ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಟ್ರಕ್ಕಿಂಗ್ ಪ್ರಿಯರಿಗೆ ಮಲೆನಾಡಿನ ಪ್ರವಾಸಿತಾಣಗಳು ಬಂದ್ ಆಗಿದೆ. ಇದು ಪ್ರವಾಸಿಗರಲ್ಲಿ ಕೊಂಚ ನಿರಾಸೆ ಮೂಡಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap