ಪುತ್ತೂರು:
ಲಂಚ ಸ್ವೀಕರಿಸುತ್ತಿದ್ದ ಫಾರೆಸ್ಟ್ ಗಾರ್ಡ್ ನನ್ನು ಎಸಿಬಿ ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯಲ್ಲಿ ಕಣಿಯೂರು ಬೀಟ್ ಫಾರೆಸ್ಟ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸುಧೀರ್ ಲಂಚ ಪಡೆದ ಆರೋಪಿ. ಸುಧೀರ್ ಅನುಮತಿಯಿಲ್ಲದ ಮರದ ತುಂಡುಗಳ ಸಾಗಾಟಕ್ಕೆ ಲಂಚ ಕೇಳಿದ್ದ ಎಂಬ ಆರೋಪ ಕೇಳಿಬಂದಿತ್ತು.
15,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸುಧೀರ್ ಈಗಾಗಲೇ 10,000 ರೂಪಾಯಿ ಪಡೆದಿದ್ದ. ಮತ್ತೆ 3 ಸಾವಿರ ರೂ. ಪಡೆಯುವ ವೇಳೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸುಧೀರ್ನನ್ನು ಹಿಡಿದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
