ಬಳ್ಳಾರಿ:
ತಮ್ಮ ಸ್ವಾರ್ಥಕ್ಕಾಗಿ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿ ರವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.
ಬಳ್ಳಾರಿಯ ಸಂಡೂರಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದ ಅವರು, ರೆಡ್ಡಿ ಬ್ರದರ್ಸ್ ಅವರು, ಲೂಟಿ ಹೊಡೆದು ಜೈಲಿಗೆ ಹೋಗಿ ಬಂದಿದ್ದಾರೆ, ಶ್ರೀರಾಮುಲು, ಶಾಂತಾ, ಕರುಣಾಕರ್ ರೆಡ್ಡಿ ಸೇರಿ ಬಿಜೆಪಿ ಸಂಸದರು ಎಂದಿಗೂ ಲೋಕಸಭೆಯಲ್ಲಿ ಜನರ ಪರ ಬಾಯಿ ತೆರೆದಿಲ್ಲ. ಬಳ್ಳಾರಿಯ ಜನತೆಗೆ ಯಾರು ದುಷ್ಟರು, ಶಿಷ್ಟರು ಎಂಬ ಅರಿವಿದೆ. ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಈ ಚುನಾವಣೆಯಲ್ಲಿ ನಾವು ಗೆಲವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
