ಬೆಂಗಳೂರು :
ಕರ್ನಾಟಕದ ಮಾಜಿ ರಾಜ್ಯಪಾಲ ಟಿ.ಎನ್.ಚತುರ್ವೇದಿ(90) ಅವರು ಕಳೆದ ರಾತ್ರಿ ಉತ್ತರ ಪ್ರದೇಶದ ನೋಯ್ಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾದರು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಅವರ ಅಂತ್ಯ ಸಂಸ್ಕಾರವನ್ನು ಕಾರಣಾಂತರಗಳಿಂದಾಗಿ ಎರಡು ದಿನಗಳ ನಂತರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಸದ್ಯ ಅವರ ಶರೀರವನ್ನು ಕೈಲಾಶ್ ಆಸ್ಪತ್ರೆಯಲ್ಲೇ ಇರಿಸಲಾಗಿದೆ.
ಟಿ.ಎನ್ ಚುತುರ್ವೇದಿ ಅವರಿಗೆ ಮೂವರು ಪುತ್ರರು, ಒಬ್ಬರು ಪುತ್ರಿ ಇದ್ದಾರೆ. ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದರೆ, ಪುತ್ರಿ ನೋಯ್ಡದ ಸೆಕ್ಟರ್ 17ರಲ್ಲಿ ವಾಸವಿದ್ದಾರೆ.
ನಿವೃತ್ತ ಐಎಎಸ್ ಆಧಿಕಾರಿಯಾಗಿದ್ದ ಟಿ.ಎನ್.ಚತುರ್ವೇದಿ ಅವರು 1991ರಲ್ಲಿ ಪದ್ಮ ವಿಭೂಷಣ ಗೌರವಕ್ಕೂ ಪಾತ್ರರಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ