ಬೆಳಗಾವಿ : ಮಾಜಿ ಶಾಸಕನ ಪುತ್ರನ ಬರ್ಬರ ಹತ್ಯೆ!

ಬೆಳಗಾವಿ :

      ಮಾಜಿ ಶಾಸಕರೊಬ್ಬರ ಪುತ್ರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಹೊರವಲಯದಲ್ಲಿ ನಡೆದಿದೆ.

      ಮಾಜಿ ಶಾಸಕ ಪರಶುರಾಮ ಬಾವು ನಂದಿಹಳ್ಳಿ ಅವರ ಪುತ್ರ ಅರುಣ್ ನಂದಿಹಳ್ಳಿ ಮೃತ ದುರ್ದೈವಿ. ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಶಿಕ್ಷಕರಾಗಿದ್ದ ಅರುಣ್ ನಂದಿಹಳ್ಳಿ ತನ್ನ ಪತ್ನಿಯನ್ನು ಧಾಮನೆ ಗ್ರಾಮಕ್ಕೆ ಬಿಟ್ಟು ಕಾರಿನಲ್ಲಿ ತಡರಾತ್ರಿ ಮನೆಗೆ ಹೊರಟಿದ್ದರು.

      ಈ ವೇಳೆ ಐದಾರು ಜನ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಅರುಣ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.  ತಕ್ಷಣವೇ ಸ್ಥಳೀಯರು ಅರುಣ್ ನಂದಿಹಳ್ಳಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಸ್ಥಳದಲ್ಲೇ ಅರುಣ್ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹಣಕಾಸಿನ ವ್ಯವಹಾರವೇ ಈ ದುರ್ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.

      ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap