ಬೆಂಗಳೂರು:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದು ಬೆಳಗ್ಗೆ ಪದ್ಮನಾಭನಗರದ ತಮ್ಮ ನಿವಾಸದ ಬಾತ್ ರೂಂನಲ್ಲಿ ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಅವರ ಕಾಲಿಗೆ ಗಾಯವಾಗಿದ್ದು, ಬಲಗಾಲಿನ ಮಂಡಿ ಬಳಿ ಉಳುಕಿದೆ ಸದ್ಯ ಯಾವುದೇ ರೀತಿಯಲ್ಲಿ ಅಪಾಯವಾಗಿಲ್ಲ ಎನ್ನಲಾಗಿದೆ.
ಇನ್ನು ದೇವೇಗೌಡರನ್ನು ಪರೀಕ್ಷೆ ಮಾಡಿರುವ ವೈದ್ಯರು ಯಾವುದೇ ಸಮಸ್ಯೆ ಇಲ್ಲ. ಬಲಗಾಲಿನ ಮಂಡಿ ಬಳಿ ಉಳುಕಿದೆ ಮೂಳೆಗೆ ಏಟಾಗಿಲ್ಲ. ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಕಾಲಿಗೆ ಬಾರ ಬೀಳದಂತೆ ನೋಡಿಕೊಳ್ಳಿ, ಯಾವುದಕ್ಕೂ ಒಂದು ಎಕ್ಸ್ ರೇ ಮಾಡಿಸಿ ಅಂತ ಹೇಳಿರುವುದರಿಂದ ಸದ್ಯ ದೇವೇಗೌಡರು ಕೆಲವೇ ಕ್ಷಣಗಳಲ್ಲಿ ಆಸ್ಪತ್ರೆಗೆ ತೆರಳಲಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ