ಬಿಗ್ ಶಾಕ್ : ಸರ್ಕಾರಿ ನೌಕರರ 4ನೇ ಶನಿವಾರದ ರಜೆಗೆ ಬಿತ್ತು ಬ್ರೇಕ್!!!

ಬೆಂಗಳೂರು:

      ಸರ್ಕಾರಿ ನೌಕರರಿಗೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ರಜೆ ನೀಡಲಾಗುತ್ತಿತ್ತು, ಆದರೆ ನಾಲ್ಕನೇ ಶನಿವಾರದ ರಜೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

      ಹೌದು,2019 ನೇ ಸಾಲಿಗೆ ಮಂಜೂರು ಮಾಡಲಾಗಿರುವ ರಜಾದಿನಗಳ ಅಧಿಸೂಚನೆ ಅನ್ವಯ ನಾಲ್ಕನೇ ಶನಿವಾರ ರಜೆ ಎಂದು ಹೇಳಲಾಗಿತ್ತು. ಹೊಸತಾಗಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಇನ್ನು ಮುಂದೆ ತಿಂಗಳ ಎರಡನೇ ಶನಿವಾರ ಮಾತ್ರವೇ ಸರ್ಕಾರಿ ರಜೆ ಇರಲಿದೆ. ನಾಲ್ಕನೇ ಶನಿವಾರದ ರಜೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಲಾಗಿದೆ.

ಸರ್ಕಾರಿ ನೌಕರರಿಗೆ ರಜೆ: ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

      ಈ ಮೂಲಕ ತಿಂಗಳಿಗೆ ಎರಡು ಶನಿವಾರ ಸೇರಿ ನಾಲ್ಕು ಭಾನುವಾರಗಳ ರಜೆ ಅನುಭವಿಸುತ್ತಿದ್ದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ