ಬೆಂಗಳೂರು :
ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಭಾರಿ/ಲಘು ವಾಹನ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಕೌಶಲ್ಯ ಕರ್ನಾಟಕ ಯೋಜನೆಯಡಿ ಉಚಿತ ತರಬೇತಿ ಮತ್ತು ತಾಂತ್ರಿಕ ತರಬೇತಿಯನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಮೂಲ ದಾಖಲೆ ಮತ್ತು ಜೆರಾಕ್ಸ್ ಪ್ರತಿ ಸಹಿತ ಕೇದ್ರೀಯ ತರಬೇತಿ ಕೇಂದ್ರ ಬೆಂಗಳೂರು ಇಲ್ಲಿಗೆ ಸಲ್ಲಿಸಬೇಕು.
ವಿಶೇಷ ಸೂಚನೆಯನ್ನು ಸಹ ನೀಡಲಾಗಿದ್ದು, ಮಾಲೂರು ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು 7760993889 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
30 ದಿನದಲ್ಲಿ ಲಘು/ಭಾರಿ ವಾಹನ ತರಬೇತಿ ನೀಡಲಾಗುತ್ತದೆ. ತಾಂತ್ರಿಕ ತರಬೇತಿಗಳಾದ ಟೈರ್ ಪಿಟ್ಟರ್, ಆಟೋ ಮೆಕ್ಯಾನಿಕ್/ವೆಲ್ಡರ್ ತರಬೇತಿಗೆ 90 ದಿನಗಳು.
ಲಘು/ಭಾರಿ ವಾಹನ ತರಬೇತಿಗೆ ದಾಖಲೆಗಳು:
* ಎಸ್‌ಎಸ್‌ಎಲ್‌ಸಿ ಉತ್ತೀರ್ಣ/ ಅನುತ್ತೀರ್ಣ ಹೊಂದಿರುವ ಅಂಕಪಟ್ಟಿ
* ಲಘು ವಾಹನ ಚಾಲನಾ ಪರವಾನಗಿಯನ್ನು ಪಡೆದು ಕನಿಷ್ಠ 1 ವರ್ಷ ಪೂರೈಸಿರಬೇಕು
* ಅರ್ಜಿ ಸಲ್ಲಿಸುವ ದಿನಾಂಕಕ್ಕೆ 21 ವರ್ಷ, ಗರಿಷ್ಠ 35 ವರ್ಷ ಮೀರಿರಬಾರದು
* ನಾಲ್ಕು ಪಾಸ್‌ಪೋರ್ಟ್ ಅಳತೆಯ ಫೋಟೋಗಳು
* ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್
* ಡಿಎಲ್, ಎಕ್ಸ್‌ಟ್ರ್ಯಾಕ್ ಸಂಬಂಧಿಸಿದ ಸಾರಿಗೆ ಕಚೇರಿಯಿಂದ
* ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಂಬಂಧಿಸಿದ ಸಾರಿಗೆ ಕಚೇರಿಯಿಂದ ತಾಂತ್ರಿಕ ತರಬೇತಿಗೆ ಟೈರ್ ಪಿಟ್ಟರ್/ಆಟೋ ಮೆಕ್ಯಾನಿಕ್/ವೆಲ್ಡರ್ ತರಬೇತಿ 90 ದಿನಗಳು
* ಎಸ್‌ಎಸ್‌ಎಲ್‌ಸಿ ಉತ್ತೀರ್ಣ/ಅನುತ್ತೀರ್ಣ ಹೊಂದಿರುವ ಅಂಕಪಟ್ಟಿ
* ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* 4 ಪಾಸ್‌ಪೋರ್ಟ್ ಅಳತೆಯ ಫೋಟೋಗಳು
* ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ