ಬೆಂಗಳೂರು:
ಕರ್ನಾಟಕ ಹೈಕೋರ್ಟ್ ಗೆ ಇಂದಿನಿಂದ ಅಕ್ಟೋಬರ್ 5ರವರೆಗೆ ದಸರಾ ರಜೆ ನೀಡಲಾಗಿದೆ.
ಹೈಕೋರ್ಟ್ ಗೆ ಇಂದಿನಿಂದ ದಸರಾ ರಜೆ ನೀಡಲಾಗಿದ್ದು, ಈ ಅವಧಿಯಲ್ಲಿ ಬೆಂಗಳೂರು ಪ್ರಧಾನ ಪೀಠದಲ್ಲಿ ಅಕ್ಟೋಬರ್ 1, ಧಾರವಾಡ ಮತ್ತು ಕಲಬುರ್ಗಿ ನ್ಯಾಯಪೀಠದಲ್ಲಿ ಅಕ್ಟೋಬರ್ 4ರಂದು ಒಂದು ದಿನ ರಜಾ ಕಾಲದ ವಿಶೇಷ ನ್ಯಾಯಪೀಠಗಳು ಕಾರ್ಯ ನಿರ್ವಹಿಸಲಿವೆ.
ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ನ್ಯಾಯಮೂರ್ತಿ ಹೆಚ್.ಟಿ. ನರೇಂದ್ರ ಪ್ರಸಾದ್, ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಅವರ ಏಕಸದಸ್ಯ ನ್ಯಾಯಪೀಠ ಬೆಂಗಳೂರು ಪ್ರಧಾನ ಪೀಠದಲ್ಲಿ ಅಕ್ಟೋಬರ್ 1 ರಂದು ಕಾರ್ಯನಿರ್ವಹಿಸಲಿದೆ.
ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಮತ್ತು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರ ವಿಭಾಗೀಯ ಪೀಠ ಮತ್ತು ಅವರುಗಳ ಪ್ರತ್ಯೇಕ ಏಕಸದಸ್ಯ ನ್ಯಾಯಪೀಠ ಅಕ್ಟೋಬರ್ 4ರಂದು ಕಾರ್ಯನಿರ್ವಹಿಸಲಿದೆ.
ಅದೇ ರೀತಿ ಅಕ್ಟೋಬರ್ 4ರಂದು ಕಲಬುರ್ಗಿ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಮತ್ತು ಸಚಿನ್ ಎಸ್. ಮಗದುಮ್ ಅವರ ನ್ಯಾಯಪೀಠ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ