ಮಂಗಳೂರು:
ಕೇಂದ್ರ ಸರಕಾರದ ಎನ್.ಸಿ.ಐ.ಬಿ ಎಂಬ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಸುಮಾರು 20 ಲಕ್ಷ ಮೌಲ್ಯದ 2 ಕಾರು, 1 ಪಿಸ್ತೂಲ್, 1 ರಿವಾಲ್ವರ್ ಮತ್ತು 8 ಜೀವಂತ ಗುಂಡುಗಳನ್ನು ಹಾಗೂ ಅವರಲ್ಲಿದ್ದ 10 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರ ದಾಳಿಯ ಭೀತಿ ಹಿನ್ನೆಲೆ ಶುಕ್ರವಾರದಿಂದ ರಾಜ್ಯದ ದೊಡ್ಡ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಡರಾತ್ರಿ ಅನುಮಾನಾಸ್ಪದವಾಗಿ 8 ಮಂದಿಯನ್ನು ಪೊಲೀಸರು ಮಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು. ಆದರೆ ವಿಚಾರಣೆ ವೇಳೆ ಆರೋಪಿಗಳ ಅಸಲಿ ಬಣ್ಣ ಬಯಲಾಗಿದೆ.
ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ನಗರ ಪೋಲಿಸ್ ಕಮೀಷನರ್ ಹರ್ಷ, ಶುಕ್ರವಾರ ಮಂಗಳೂರು ನಗರದ ಪಂಪ್ ವೆಲ್ ಬಳಿ ದರೋಡೆ ಮಾಡುವ ಉದ್ದೇಶದಿಂದ ಕಾರಿನಲ್ಲಿ ಕುಳಿತು ಹೊಂಚು ಹಾಕುತ್ತಿದ್ದಾರೆಂದು ಮೇಲಾಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಅದರಂತೆ ಕದ್ರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ನಂಬರ್ ಪ್ಲೇಟ್ ಇಲ್ಲದ ಪೂರ್ಣ ಕಪ್ಪು ಟಿಂಟ್ ಇದ್ದ ಮಹೀಂದ್ರಾ ಎಸ್ ಯುವಿ – 300 ಕಾರಿನಲ್ಲಿ ಕುಳಿತಿದ್ದ 5 ಜನರು ಪರಾರಿಯಾಗಲು ಪ್ರಯತ್ನ ನಡೆಸಿದ ವೇಳೆ ಪೊಲೀಸರು ಅಡ್ಡ ಹಾಕಿ ತಡೆದಿದ್ದು ನಂತರ ಪರಿಶೀಲಿಸಿದಾಗ ಕಾರಿನ ಮುಂಬಾಗದಲ್ಲಿ ಎನ್ ಸಿ ಐಬಿ ನಿರ್ದೇಶಕರು ಎಂದು ಬರೆದಿದ್ದು, ಕಾರಿನಲ್ಲಿ ಚಾಲಕ ಸೇರಿ ಸಫಾರಿ ಡ್ರೆಸ್ ಹಾಕಿದವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಮ್ಮ ಜೊತೆ ಸಾಯಿ ಆರ್ಯ ಲಾಡ್ಜ್ ನಲ್ಲಿ ನಮ್ಮ ಸರ್ ಸ್ಯಾಮ್ ಪೀಟರ್ ಇರುವುದಾಗಿ ತಿಳಿಸಿ ಮತ್ತು ಇತರ ಇಬ್ಬರು ಇದ್ದು ಅವರ ಸೂಚನೆ ಮೇರೆಗೆ ದರೋಡೆ ನಡೆಸಲು ಹೊಂಚು ಹಾಕುತ್ತಿದ್ದುದ್ದಾಗಿ ತಿಳಿಸಿದ್ದಾರೆ.
ಕಾರಿನಲ್ಲಿದ್ದ ಬೋಪಣ್ಣ ಎಂಬಾತನ ಕೈಯಲ್ಲಿ ಒಂದು ರಿವಾಲ್ವರ್ ಮತ್ತು ಅದರಲ್ಲಿ 8 ಜೀವಂತ ಗುಂಡುಗಳಿದ್ದು, ನಂತರ ಸಾಯಿ ಲಾಡ್ಜ್ ಗೆ ಬಂದು ರೂಮ್ ನಲ್ಲಿ ನೋಡಿದಾಗಿ 3 ಜನರು ಇದ್ದು ಅವರಲ್ಲಿ ಮೊಹಿದ್ದಿನ್ ಮಂಗಳೂರು, ಅಬ್ದುಲ್ ಲತೀಫ್ ಮಂಗಳೂರು ಮತ್ತೋರ್ವ ಸಾಮ್ ಪೀಟರ್ ಎಂದು ತಿಳಿಸಿ ತಾನು ಕೇಂದ್ರ ಸರಕಾರದ ಎನ್ ಸಿ ಐ ಬಿ ನಿರ್ದೇಶಕ ಎಂದು ತಿಳಿಸಿದ್ದರು.
ಬಂಧಿತ ಆರೋಪಿಗಳನ್ನು ಕೇರಳದ ಕೊಯಿಲಾಡಿ ಮೂಲದ ಸ್ಯಾಂ ಪೀಟರ್, ಮಡಿಕೇರಿಯ ಟಿ.ಕೆ ಬೋಪಣ್ಣ, ಬೆಂಗಳೂರಿನ ನೀಲಸಂದ್ರದ ಮದನ್, ಉತ್ತರ ಹಳ್ಳಿಯ ಕೋದಂಡರಾಮ, ವಿರಾಜಪೇಟೆಯ ಚಿನ್ನಪ್ಪ, ಕನಕಪುರದ ಸುನಿಲ್ ರಾಜು, ಮಂಗಳೂರಿನ ಕುಳೂರಿನ ಜಿ. ಮೊಯ್ದೀನ್, ಫಳ್ನೀರ್ ನಿವಾಸಿ ಎಸ್.ಎ.ಕೆ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.
ಸದ್ಯ ಆರೋಪಿಗಳಿಂದ 2 ಮಹೀಂದ್ರಾ ಕಾರು, 45 ಎಂಎಂ 2 ಪಿಸ್ತೂಲು, ಏರ್‍ಗನ್ ರೀತಿ ಆಯುಧ, 5 ಸಜೀವ ಗುಂಡು, ಲ್ಯಾಪ್ ಟಾಪ್, ವಾಯ್ಸ್ ರೆಕಾರ್ಡರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ